XII. ಅ)ರೈತ ಸಂಪರ್ಕ ಕೇಂದ್ರಗಳು
ಉದ್ದೇಶ:
- ಬೆಳೆ ಆಯ್ಕೆ, ಬೆಳೆ ಉತ್ಪಾದನಾ ಕಾರ್ಯಕ್ರಮಗಳು ಮಾರುಕಟ್ಟೆ ಮಾಹಿತಿ ಮುಂತಾದ ವಿಷಯಗಳ ಬಗ್ಗೆ ರೈತರಿಗೆ ಆಧುನಿಕ ಮಾಹಿತಿ ನೀಡುವುದು.
- ಕೃಷಿ ಪರಿಕರಗಳಾದ ಬೀಜ ರಸಗೊಬ್ಬರ, ಸಸ್ಯ ಸಂರಕ್ಷಣಾ ಔಷಧಿ ಮುಂತಾವುಗಳನ್ನು ಸ್ಥಳೀಯವಾಗಿ ಒದಗಿಸಲು ಸಂಯೋಜನೆ ಮಾಡುವುದು
- ಬೀಜ ಮೊಳಕೆ ಮತ್ತು ಗುಣಮಟ್ಟ ಪರೀಕ್ಷೆ, ಮಣ್ಣು ಪರೀಕ್ಷೆ ಇತ್ಯಾದಿ ಮೂಲ ಪರೀಕ್ಷಾ ಸೌಲಭ್ಯಗಳನ್ನು ಸ್ಥಳೀಯವಾಗಿ ಒದಗಿಸುವುದು.
- ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಬಿತ್ತನೆ ಮತ್ತು ಇತರ ಪರಿಕರಗಳ (ತಾಂತ್ರಿಕತೆಗಳು) ಪ್ರಾತ್ಯಕ್ಷಿಕೆಗಾಗಿ ಸೌಲಭ್ಯ ಒದಗಿಸುವುದು.
- ಸಾರ್ವಜನಿಕ ಮತ್ತು ಖಾಸಗಿ ರಂಗಗಳ ತಂತ್ರಜ್ಞಾನ ಮತ್ತು ಪರಿಕರಗಳ ತುಲನೆ/ಪರಿಶೀಲನೆಗೆ ಅವಕಾಶ ಒದಗಿಸುವುದು.
ರೈತ ಸಂಪರ್ಕ ಕೇಂದ್ರಗಳು ಎಲ್ಲಾ ಕಛೇರಿ ದಿವಸಗಳಂದು ಕಛೇರಿ ವೇಳೆಯಲ್ಲಿ (ಬೆಳಗ್ಗೆ 10.00 ಘಂಟೆಯಿಂದ ಸಂಜೆ 5.30 ಘಂಟೆವರೆಗೆ) ಕಾರ್ಯ ನಿರ್ವಹಿಸತಕ್ಕದ್ದು. ಕಛೇರಿ ವೇಳೆಯಲ್ಲಿ ಯಾವುದೇ ಕಾರಣಕ್ಕೂ ರೈತ ಸಂಪರ್ಕ ಕೇಂದ್ರಗಳ ಬಾಗಿಲು ಮುಚ್ಚಿರಕೂಡದು. ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರದಲ್ಲಿ ಕಛೇರಿ ವೇಳೆಯಲ್ಲಿ ಸದಾ ಹಾಜರಿದ್ದು, ಭೇಟಿ ನೀಡುವ ರೈತರಿಗೆ ಅವಶ್ಯಕ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು ಹಾಗೂ ಕೇಂದ್ರದಲ್ಲಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು.
ತಾಲ್ಲೂಕು ಸಹಾಯಕ ಕೃಷಿ ನಿದೇಶಕರು:
- ಕೇಂದ್ರವಾರು ನಿಯೋಜಿಸಲಾದ ಸಹಾಯಕ ಕೃಷಿ ಅಧಿಕಾರಿ ಒಬ್ಬರನ್ನು ಕೇಂದ್ರದ ದಿನನಿತ್ಯದ ಮೇಲ್ವಚಾರಣೆಗೆ ಖಾಯಂ ಆಗಿ ನಿಯೋಜಿಸಬೇಕು.
- ಹಾಗೂ ಇನ್ನುಳಿದ ಸಹಾಯಕ ಕೃಷಿ ಅಧಿಕಾರಿಗಳು ಗ್ರಾಮ ಪಂಚಾಯತಿಯನ್ನು ಘಟಕವಾಗಿರಿಸಿಕೊಂಡು ಕಾರ್ಯವ್ಯಾಪ್ತಿ ನಿಗದಿಪಡಿಸಬೇಕು.
- ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಎಲ್ಲಾ ವಿಸ್ತರಣಾ ಅಧಿಕಾರಿ / ಕಾರ್ಯಕರ್ತರು ನಿಗದಿತ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸವಾಗಿರುವಂತೆ ಕ್ರಮವಹಿಸಬೇಕು.
ಕೇಂದ್ರಕ್ಕೆ ಭೇಟಿ ನೀಡುವ ರೈತರ ವಿವರಗಳನ್ನು ರೈತ ಸಂಪರ್ಕ ಸ್ಪಂದನ ವಹಿಯಲ್ಲಿ ದಾಖಲಿಸಿ ರೈತರಿಗೆ ಮಾಹಿತಿ ನೀಡಬೇಕು. ವಹಿಗಳ ಕಾಲಂಗಳು ಈ ಕೆಳಗಿನಂತಿರಬೇಕು.
ಕ್ರ. ಸಂ. | ರೈತರ ಹೆಸರು /ವಿಳಾಸ | ಸಮಸ್ಯೆ | ಸಲಹೆ | ರೈತರ ರುಜು |
1 | ||||
2 |
ಸದರಿ ವಹಿಯಲ್ಲಿ ಪ್ರತಿ ದಿವಸದ ಪ್ರಾರಂಭದಲ್ಲಿ ಆ ದಿನದ ದಿನಾಂಕವನ್ನು ಕೆಂಪು ಶಾಯಿಯಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು. ರೈತರಿಗೆ ಸಲಹೆಗಳನ್ನು ಸಲಹಾ ಚೀಟಿಯಲ್ಲಿ ಸ್ಪಷ್ಟವಾಗಿ ಈ ಮೇಲಿನ ವಹಿಯಲ್ಲಿ ನಮೂದಿಸಿದಂತೆಯೇ ಬರೆದುಕೊಡತಕ್ಕದ್ದು. ಸಲಹಾ ಚೀಟಿಯ ನಮೂನೆಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಕ್ರಮ ಸಂಖ್ಯೆಯನ್ನು ಪ್ರತಿ ಮಾಹೆಗೆ ಒಂದು ಸಲ ಬದಲಿಸಬೇಕು.
ಸಂತೆಯ ದಿವಸಗಳಂದು ಎಲ್ಲಾ ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳು ಹಾಗೂ ತೋಟಗಾರಿಕೆ, ಪಶು ವೈದ್ಯಕೀಯ, ರೇಷ್ಮೆ ಮೀನುಗಾರಿಕೆ ಇವೇ ಮುಂತಾದ ಕೃಷಿ ಸಂಬಂಧಿತ ಇಲಾಖೆಗಳ ತಾಂತ್ರಿಕ ಸಿಬ್ಬಂದಿಯವರು ( ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಂಯೋಜನೆಯೊಂದಿಗೆ ಏರ್ಪಾಡು ಮಾಡಬೇಕು) ಕೇಂದ್ರದಲ್ಲಿ ಹಾಜರಿದ್ದು ರೈತರಿಗೆ ಮಾಹಿತಿ ನೀಡಬೇಕು.
ಕೃಷಿ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ರೈತರ ಮತ್ತು ಗ್ರಾಮಗಳ ಸಂಖ್ಯೆಯನ್ನಾಧರಿಸಿ ನಿಯತವಾಗಿ ಗುಂಪುವಾರು ಭೇಟಿ ಕಾರ್ಯಕ್ರಮದನ್ವಯ ಕ್ಷೇತ್ರ ಭೇಟಿ, ವಿಸ್ತರಣಾ ಕಾರ್ಯ ಹಾಗೂ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಬೇಕು. ಪಾಕ್ಷಿಕ ತರಬೇತಿಯ ಕಾಲಕ್ಕೆ ಸಜೀವ ಮಾದರಿಗಳೊಂದಿಗೆ ಮಾಹಿತಿಯನ್ನು ನೀಡುವುದಲ್ಲದೆ ಪಡೆದ ಪರಿಹಾರಗಳನ್ನು ರೈತರಿಗೆ ನೀಡಬೇಕು.
ಕೇಂದ್ರಗಳಲ್ಲಿ ಮಾಹಿತಿ ವಿಸ್ತರಣೆ ಹಾಗೂ ಪ್ರದರ್ಶನದೊಂದಿಗೆ ಅಚ್ಚುಕಟ್ಟುತನ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೇಂದ್ರಗಳಲ್ಲಿ ಸ್ವಚ್ಛತೆ ಮತ್ತು ನೀರಿನ ವ್ಯವಸ್ಥೆ, ನೀರಿನ ಶುಲ್ಕ, ವಿದ್ಯುತ್ ಶುಲ್ಕ, ಸಣ್ಣ ದುರಸ್ತಿ (ಇಲಾಖೆಯ ಕಟ್ಟಡಗಳಲ್ಲಿ ಮಾತ್ರ) ಮತ್ತು ದೂರವಾಣಿ ವೆಚ್ಚಗಳಿಗಗಿ ಲೆಕ್ಕ ಶೀರ್ಷಿಕ 2401-00-001-1-01 ಕೃಷಿ ನಿರ್ದೇಶನಾಲಯ ಯೋಜನೆ(ಉಪ ಲೆಕ್ಕ ಶೀರ್ಷಿಕೆ 071)ರಡಿ ಒದಗಿಸಲಾದ ಅನುದಾನನ್ನು ಉಪಯೋಗಿಸಬಹುದಾಗಿದೆ.
ಕೇಂದ್ರದಲ್ಲಿ ಈ ಕೆಳಕಾಣಿಸಿದ ಮಾಹಿತಿ ಒದಗಿಸುವ ದಾಖಲೆ/ಪಟ್ಟಿಗಳನ್ನು ಹಾಗೂ ಇಲಾಖೆಯ ವಿವಿಧ ಸುತ್ತೋಲೆಗಳನ್ನು ತಿಳಿಸಿರುವ ಪ್ರಕಾರ ದಾಖಲೆ /ವಹಿಗಳನ್ನು ವ್ಯವಸ್ಥಿತವಾಗಿ ಇರಿಸಿ ಪ್ರದರ್ಶಿಸತಕ್ಕದ್ದು.
- ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ನಕಾಶೆ.
- ಹೋಬಳಿಯ ಸಾಮಾನ್ಯ ಮಾಹಿತಿ
- ರೈತರ ಸ್ಪಂದನ ವಹಿ
- ಹಾಜರಿ ಪುಸ್ತಕ
- ಮೇಲಾಧಿಕಾರಿಗಳ ಭೇಟಿ ಪುಸ್ತಕ
- ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಯ ಹೆಸರುಗಳ ಪಟ್ಟಿ
- ಚಲನವಲನ ಪುಸ್ತಕ
- ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿಯ ಕಾರ್ಯವ್ಯಾಪ್ತಿ/ಕೇಂದ್ರ ಸ್ಥಾನ ಗುರುತಿಸುವ ನಕಾಶೆ
- ಹೋಬಳಿಯ ಗ್ರಾಮವಾರು ಹಿಡುವಳಿಗಳ ಪಟ್ಟಿ
- ಹೋಬಳಿಯ ಗ್ರಾಮವಾರು ಹಿಡುವಳಿಗಳ ಬೆಳೆವಾರು ಸಾಮಾನ್ಯ ಕ್ಷೇತ್ರ ಆವರಣ ವಿವರ ಹಾಗೂ ಮಳೆ ವಿವರ
- ಹೋಬಳಿಯ ಗ್ರಾಮವಾರು ಹಿಡುವಳಿಗಳ ಬೆಳೆವಾರು ಕ್ಷೇತ್ರ ಆವರಣ ವಿವರ ( ಹಿಂದಿನ ಹತ್ತು ವರ್ಷಗಳ ವಿವರ)
- ಬೆಳೆವಾರು, ತಳಿವಾರು ಬೀಜ, ರಸಗೊಬ್ಬರ, ಕೀಟನಾಶಕ, ಬೀಜೋಪಚಾರ ಔಷಧಿಗಳು, ಶಿಲೀಂದ್ರನಾಶಕ, ಕಳೆನಾಶಕ, ಸಾವಯವ ಕೀಟನಾಶಕಗಳು ಐ.ಪಿ.ಎಂ. ಸಾಮಾಗ್ರಿಗಳು, ಬೆಳೆ ಸಮಸ್ಯೆ ಕುರಿತು ಸಜೀವ ಮಾದರಿಗಳು ತಾಂತ್ರಿಕತೆಗಳ ಬಗ್ಗೆ ಸಮಗ್ರ ವಿವರಗಳನ್ನೊಳಗೊಂಡ ಮಾಹಿತಿ ಮುಂತಾದವುಗಳ ಮಾದರಿಗಳು.
- ಇಲಾಖಾವಾರು ಭಿತ್ತಿ ಪತ್ರಗಳ ವ್ಯವಸ್ಥಿತ ಪ್ರದರ್ಶನ ( ಸಾಗುವಳಿ ಕ್ರಮ, ಸಾವಯವ ಕೃಷಿ, ಬೀಜ ರಸಗೊಬ್ಬರ ಸಮಗ್ರ ಪೀಡೆ ನಿರ್ವಹಣೆ ಇವೇ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಭಿತ್ತಿ ಪತ್ರಗಳು ಹಾಗೂ ಇಲಾಖೆಯ ಪ್ರಕಟಣೆಗಳು, ಉದಾ: ಕೃಷಿ ಪೇಟೆ, ಇತ್ಯಾದಿ)
- ವಿವಿಧ ಬೆಳೆ ಉತ್ಪಾದನೆ ತಾಂತ್ರಿಕತೆಗಳ ಹಸ್ತಪ್ರತಿಗಳು
- ಬೀಜ ಮೊಳಕೆ ಪರೀಕ್ಷಾ ಸಲಕರಣೆಗಳು ಹಾಗೂ ಸಂಬಂಧಿಸಿದ ವಹಿ
- ರಸಗೊಬ್ಬರ ಹಾಗೂ ಕೀಟನಾಶಕ ಮಾದರಿ ವಿಶ್ಲೇಷಣೆಗೆ ಸಂಬಂಧಿಸಿದ ಸಲಕರಣೇಗಳು ಹಾಗೂ ವಹಿಗಳು
- ಕೃಷಿ ಪರಿಕರ ಮಾರಾಟ (ಸರ್ಕಾರಿ ಹಾಗೂ ಖಾಸಗಿ) ಮಳಿಗೆಗಳ ಪಟ್ಟಿ (ಲೈಸೆನ್ಸ್ ವಿವರಗಳೊಂದಿಗೆ)
- ರೈತ ಸಂಪರ್ಕ ಕೇಂದ್ರದಲ್ಲಿರುವ ಫಲಕದ ಮೇಲೆ ಚಾಲ್ತಿ ಪಾಕ್ಷಿಕದ ಮಹತ್ವದ ಸಂದೇಶಗಳನ್ನು ಮತ್ತು ನಿನ್ನೆಯ ಪೇಟೆ ಧಾರಣೆಗಳು ಶೀರ್ಷಿಕೆ ಅಡಿಯಲ್ಲಿ ಪ್ರಮುಖ ಕೃಷಿ ಉತ್ಪನ್ನಗಳ ಬೆಲೆಗಳನ್ನು ದೈನಿಕ ಪತ್ರಿಕೆಗಳಿಂದ ಪಡೆದು ಬರೆಯತಕ್ಕದ್ದು.(ನಮೂನೆ ಅನುಬಂಧ -2 ರಲ್ಲಿರುವಂತೆ)
- ತಾಲ್ಲೂಕು ಹಾಗೂ ಜಿಲ್ಲಾ ಮಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಕ್ರಮವಾಗಿ ಮಾಹೆ ಮತ್ತು ದ್ವೈಮಾಸಿಕದಲ್ಲಿ ಕನಿಷ್ಟ ಒಂದು ಬಾರಿ ಕೇಂದ್ರವನ್ನು ಸಂದರ್ಶಿಸಿ ನ್ಯೂನತೆಗಳನ್ನು ಸರಿಪಡಿಸಲು ಸಂದರ್ಶನವಹಿಯಲ್ಲಿ ಸ್ಪಷ್ಟ ಮಾರ್ಗದರ್ಶನ ನೀಡತಕ್ಕದ್ದು.
- ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಕೆಲವೊಂದು ವಹಿಗಳನ್ನು ನಿರ್ವಹಿಸಬೇಕಾಗಿದ್ದು ವಿವರಗಳನ್ನು ಅನುಬಂಧ-3 ರಲ್ಲಿ ನೀಡಿದೆ.
ರೈತ ಸಂಪರ್ಕ ಕೇಂದ್ರಗಳ ಪ್ರಗತಿಯ ವಿವರಗಳನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರವರು ಪ್ರತಿ ತಿಂಗಳು ದಿನಾಂಕ: 5 ರೊಳಗಾಗಿ ಕೇಂದ್ರ ಕಛೇರಿಗೆ ಕಳುಹಿಸಬೇಕು. ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಪ್ರಗತಿಯ ವಿವರಗಳನ್ನು ಪಡೆದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ದಿನಾಂಕ 5 ರೊಳಗಾಗಿ ಪ್ರತಿ ತಿಂಗಳೂ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರವರಿಗೆ ತಲುಪಿಸತಕ್ಕದ್ದು. ಪ್ರಗತಿ ನಮೂನೆಯನ್ನು ಅನುಬಂಧ-4 ರಲ್ಲಿ ನೀಡಿದೆ.
ಅನುಬಂಧ-1
ಕರ್ನಾಟಕ ಸರ್ಕಾರ
ರೈತ ಸಂಪರ್ಕ ಕೇಂದ್ರ ಕೃಷಿ ಸಲಹಾ ಚೀಟಿ ಕ್ರ.ಸಂ ದಿ: ರೈತರ ವಿಳಾಸ ಶ್ರೀ/ಶ್ರೀಮತಿ——————— ಗ್ರಾಮ————————— ಗ್ರಾ.ಪಂ.————————- |
ಕರ್ನಾಟಕ ಸರ್ಕಾರ
ಕರ್ನಾಟಕ ರಾಜ್ಯ ಕೃಷಿ ಇಲಾಖೆ ಜಿಲ್ಲಾ ಪಂಚಾಯತ್ ರೈತ ಸಂಪರ್ಕ ಕೇಂದ್ರ ———— ತಾಲ್ಲೂಕು ಕೃಷಿ ಸಲಹಾ ಚೀಟಿ ಕ್ರ.ಸಂ: ದಿನಾಂಕ: ರೈತರ ವಿಳಾಸ ಶ್ರೀ/ಶ್ರೀಮತಿ ————————— ಗ್ರಾಮ ———————————- ಗ್ರಾ.ಪಂ ——————————– |
|
ಸಲಹೆಗಳು (ಸಂಕ್ಷಿಪ್ತವಾಗಿ)
ರೈತರ ರುಜು ಕೃಷಿ ಅಧಿಕಾರಿ
|
ಅ.ಸಂ. | ಸಲಹೆಗಳು |
ಕೃಷಿ ಅಧಿಕಾರಿ |
ಅನುಬಂಧ-2
ಮಹತ್ವದ ಸಂದೇಶಗಳು
ಚಾಲ್ತಿ ಪಕ್ಷ————————-ರಿಂದ————————— ರವರೆಗೆ
ಕ್ರ.ಸಂ | ಬೆಳೆ | ಸಂದೇಶ |
1 | ||
2 |
ಚಾಲ್ತಿಯಲ್ಲಿರುವ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಾನ್ಯ ಸಂದೇಶಗಳು
- —————————————————–
2._________________________________________________________
ನಿನ್ನೆಯ ಪೇಟೆ ಧಾರಣೆಗಳು_______________________________________________ ಮಾರುಕಟ್ಟೆ
ಅ.ಸಂ | ಸರಕು | ದರ ರೂ. ಕ್ವಿಂಟಾಲ್ ಗೆ |
1 | ||
2 |
ಅನುಬಂಧ-3
ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ನಿರ್ವಹಿಸತಕ್ಕ ವಹಿಗಳು.
1.ದಿನಚರಿ
- ದಾಸ್ತಾನು ವಹಿ (ಜಡವಸ್ತು)
- ದಾಸ್ತಾನು ವಹಿ (ತಾಂತ್ರಿಕ)
- ಮಣ್ಣು ಪರೀಕ್ಷೆ ಅನುಸರಣೆ
- ಪ್ರಾತ್ಯಕ್ಷೆಕೆ ( ಕಿರುಚೀಲ ಪ್ರಾತ್ಯಕ್ಷಿಕೆ ಸಹಿತ)
6.ಬೆಳೆ ಕಟಾವು ಪ್ರಯೋಗಗಳ ವಿವರಗಳು
- ಇಲಾಖಾ ಕಾರ್ಯಕ್ರಮಗಳ ಮಾರ್ಗಸೂಚಿಗಳು.
- ಪಾಕ್ಷಿಕ ತರಬೇತಿ ನಡವಳಿಗಳು
- ಹಾಜರಾತಿ ಮಾಹಿತಿ ಕಡತ
- ಮೇಲಾಧಿಕಾರಿಗಳಿಂದ ಬಂದ ಪತ್ರಗಳು ಹಾಗೂ ಅವುಗಳಿಗೆ ನೀಡಿದ ಉತ್ತರಗಳ ಕಡತ
- ವಿಶಿಷ್ಟ ಸಾಧನೆಗಳು
- ಬೆಳೆ ಉತ್ಪಾದನಾ ಕಾರ್ಯಕ್ರಮ
- ರಿಯಾಯಿತಿ ಸೌಲಭ್ಯ ವಿತರಣಾ ವಹಿ
14.ನೀರಾವರಿ ಮೂಲವಾರು ಬೆಳೆ ಯೋಜನೆ ಮತ್ತು ಪ್ರಗತಿ
- ನಗದು ಪುಸ್ತಕ – (ದೈನಂದಿನ ಆಧಾರದಲ್ಲಿ ಬ್ಯಾಂಕಿಗೆ ಹಣ ಜಮಾ ಕಾರ್ಯಕ್ಕೆ ಹೊಂದಾಣಿಕೆ ಇರಬೇಕು)
16.ಎರಡು ಪ್ರತ್ಯೆಕ (ಸೇವಾಶುಲ್ಕ ಮತ್ತು ಮಾರಾಟ ಬಾಬ್ತು ಕುರಿತು) ಬ್ಯಾಂಕ್ ಖಾತೆಗಳ ಲೆಕ್ಕ ಪುಸ್ತಕಗಳು (ಬ್ಯಾಂಕ್ ಗಳು ನೀಡಿದ್ದು ಮಾತ್ರ)
- ದಾಸ್ತಾನು ವಹಿ
- ಮೊಳಕೆ ಪರೀಕ್ಷೆವಹಿ
- ಮಣ್ಣು ಪರೀಕ್ಷೆವಹಿ
- ಬೆಳೆ ಕಟಾವು ಪ್ರಯೋಗಗಳ ವಿವರಗಳು
- ಪ್ರಾತ್ಯಕ್ಷಿಕೆ ವಹಿ
- ಬೆಳೆ ಕ್ಷೇತ್ರ (ಬೆಳೆ ಪತ್ರಿಕೆ ವಹಿ)
- ವಿಶಿಷ್ಟ ಸಾಧನೆಗಳು
ಅನುಬಂಧ-4
ರೈತ ಸಂಪರ್ಕ ಕೇಂದ್ರಗಳ ಚಟುವಟಿಕೆಗಳ ಪ್ರಗತಿ ವರದಿ
2022-23 ನೇ ಸಾಲಿನ __________ಮಾಹೆಯ ಅಂತ್ಯದ ವರದಿ
( ದಿನಾಂಕ: 01.04.2022 ರ —–ಮಾಹೆಯ ಅಂತ್ಯದವರೆಗಿನ ಸಂಚಿತ ವರದಿ)
ಕ್ರ.ಸಂ. | ತಾಲ್ಲೂಕು | ಸಂದರ್ಶಿಸಿದ ರೈತರ ಸಂಖ್ಯೆ | ಸಲಹೆ ಪಡೆದ ರೈತರ ಸಂಖ್ಯೆ | ಬೀಜ ಪಡೆದ ರೈತರ ಸಂಖ್ಯೆ | ಸಸ್ಯ ಸಂರಕ್ಷಣಾ ಔಷಧಿ ಪಡೆದ ರೈತರ ಸಂಖ್ಯೆ | ಕೃಷಿ ಉಪಕರಣ ಪಡೆ ದ ರೈತರ ಸಂಖ್ಯೆ | ಸಸ್ಯ ಸಂರಕ್ಷಣಾ ಔಷಧಿ ಸಿಂಪರಣಾ ಉಪಕರಣ ಪಡೆದ ರೈತರ ಸಂಖ್ಯೆ | ಇತರೆ ಉದ್ದೇಶಗಳಿ ಗಾಗಿ ಭೇಟಿ ನೀಡಿದ ರೈತರ ಸಂಖ್ಯೆ |
1 | 2 | 3 | 4 | 5 | 6 | 7 | 8 | 9 |
ಒಟ್ಟು | ||||||||
ಜಿಲ್ಲೆ:
ಸೇವಾ ಶುಲ್ಕ ಸಂಗ್ರಹಣಾ ವಿವರ | ಒಟ್ಟು ಸಂಗ್ರಹಿಸಲಾದ ಸೇವಾ ಶುಲ್ಕ ರೂ.ಗಳಲ್ಲಿ | ಷರಾ | ||||||
ಮಣ್ಣು ಮಾದರಿ ಪರೀಕ್ಷೆ | ಬೀಜ ಪರೀಕ್ಷೆ | ಬೀಜ ಮಾರಾಟ | ಇತರೆ ಬಾಬ್ತು | |||||
ಮಣ್ಣು ಮಾದರಿಗಳ ಸಂಖ್ಯೆ | ಸೇವಾ ಶುಲ್ಕ ರೂ.ಗಳಲ್ಲಿ | ಮಾದರಿಗಳ ಸಂಖ್ಯೆ | ಸೇವಾ ಶುಲ್ಕ ರೂ.ಗಳಲ್ಲಿ | ಪ್ರಮಾಣ ಕ್ವಿ.ಗಳಲ್ಲಿ | ಸೇವಾ ಶುಲ್ಕ ರೂ.ಗಳಲ್ಲಿ | ಸೇವಾ ಶುಲ್ಕ ರೂ.ಗಳಲ್ಲಿ | ||
1 | 2 | 3 | 4 | 5 | 6 | 7 | 8 | 9 |
ರೈತ ಸಂಪರ್ಕ ಕೇಂದ್ರಗಳಿಗೆ ವಿದ್ಯಾರ್ಥಿಗಳ ನಿಯೋಜನೆ(ಯೋಜನೆ)
ಲೆಕ್ಕ ಶೀರ್ಷಿಕೆ: 2401-00-001-1-01, ಉಪ ಲೆಕ್ಕ ಶೀರ್ಷಿಕೆ:103
2013-14 ನೇ ಸಾಲಿನಿಂದ ರೈತ ಸಂಪರ್ಕ ಕೇಂದ್ರಗಳಿಗೆ ವಿದ್ಯಾರ್ಥಿಗಳ ನಿಯೋಜನೆ ಕಾರ್ಯಕ್ರಮವನ್ನು ರಾಜ್ಯ ವಲಯದಲ್ಲಿ ಪ್ರಾರಂಭಿಸಲಾಗಿರುತ್ತದೆ. 2022-23 ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ: 2401-00-001-1-01, ಉಪ ಲೆಕ್ಕ ಶೀರ್ಷಿಕೆ:103 ರಲ್ಲಿ ರೂ. 40.00 ಲಕ್ಷಗಳ ಅನುದಾನವನ್ನು ಕಲ್ಪಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಂತಿಮ ವರ್ಷದ (RAWE ಕಾರ್ಯಕ್ರಮದ) ವಿದ್ಯಾರ್ಥಿಗಳನ್ನು ಕನಿಷ್ಟ ಪ್ರಾಯೋಗಿಕ ಕೌಶಲ್ಯ , ಕ್ಷೇತ್ರ ಅನುಭವ ಮತ್ತು ಜ್ಞಾನಕ್ಕಾಗಿ ಅವರನ್ನು ರೈತ ಸಂಪರ್ಕ ಕೇಂದ್ರಗಳಿಗೆ ಕನಿಷ್ಟ ಮೂರು ತಿಂಗಳ ಅವಧಿಗೆ ನಿಯೋಜಿಸಲು ಈ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಿಗೆ ಕನಿಷ್ಟ ಮೂರು ತಿಂಗಳ ಅವಧಿಗೆ ನಿಯೋಜಿಸಲಾದ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ರು.3000/- ರಂತೆ ಗೌರವಧನ ನೀಡಲು ಈಯೋಜನೆಯಡಿ ವೆಚ್ಚ ಭರಿಸಲಾಗುವುದು.
ಕೃಷಿ ವಿಶ್ವವಿದ್ಯಾಲಯದವರು ರೈತ ಸಂಪರ್ಕ ಕೇಂದ್ರವಾರು ನಿಯೋಜಿಸಿರುವ ವಿದ್ಯಾರ್ಥಿಗಳ ವಿವರ, ನಿಯೋಜನೆಯ ಅವಧಿ (ದಿನಾಂಕ: ಇಂದ-ರವರೆಗೆ)ಮಾರ್ಗದರ್ಶನ ನೀಡುವ ಪ್ರಾಧ್ಯಾಪಕರ /ವಿಷಯ ತಜ್ಞರ ಹೆಸರು, ದೂರವಾಣಿ ಸಂಖ್ಯೆ ಹಾಗೂ ನಿಯೋಜನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿರುವ ಪಠ್ಯಕ್ರಮ/ನಿಗಧಿಪಡಿಸಿರುವ ಕರ್ತವ್ಯದ ವಿವರಗಳನ್ನು ಒದಗಿಸುತ್ತಾರೆ.
ಎಲ್ಲಾ ಜಂಟಿ ಕೃಷಿ ನಿರ್ದೇಶಕರು ರೈತ ಸಂಪರ್ಕ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ನಿಯೋಜಿಸಿದಾಗ ಸದರಿಯವರಿಗೆ ಸಹಕರಿಸುವುದು ಹಾಗೂ ಸೌಲಭ್ಯಗಳನ್ನು ಒದಗಿಸುವುದು.
ರೈತ ಸಂಪರ್ಕ ಕೇಂದ್ರಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳ ನಿಯೋಜನೆ
ಲೆಕ್ಕ ಶೀರ್ಷಿಕೆ: 2401-00-001-1-01, ಉಪ ಲೆಕ್ಕ ಶೀರ್ಷಿಕೆ:034
2014-15 ನೇ ಸಾಲಿನಿಂದ ರೈತ ಸಂಪರ್ಕ ಕೇಂದ್ರಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳ ನಿಯೋಜನೆ ಕಾರ್ಯಕ್ರಮವನ್ನು ರಾಜ್ಯ ವಲಯದಲ್ಲಿ ಪ್ರಾರಂಭಿಸಲಾಗಿರುತ್ತದೆ. 2022-23 ನೇ ಸಾಲಿನಲ್ಲಿ ರೈತ ಸಂಪರ್ಕ ಕೇಂದ್ರಗಳ ದಾಸ್ತಾನು ನಿರ್ವಹಣೆ ಹಾಗೂ ದಾಖಲಾತಿ ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದಲ್ಲಿ ಮೇಲೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರುಗಳು ಇ-ಟೆಂಡರ್ ಮೂಲಕ ಸಿಬ್ಬಂದಿಗಳನ್ನು ಪ್ರತಿ ರೈತ ಸಂಪರ್ಕ ಕೇಂದ್ರಗಳಿಗೆ ಒಬ್ಬರಂತೆ ನಿಯೋಜಿಸಿಕೊಳ್ಳುವುದು.
ಕೃಷಿ ಆಯುಕ್ತಾಲಯ ಲೆಕ್ಕ ಶೀರ್ಷಿಕೆ: 2401-00-001-1-01, ಉಪ ಲೆಕ್ಕ ಶೀರ್ಷಿಕೆ: 034 ರ ಅನುದಾನದಲ್ಲಿ ವೇತನ ಪಾವತಿ ಮಾಡುವುದು. ನಂತರ ಪೂರ್ಣ ಮಾಹಿತಿಯುಳ್ಳ ವರದಿಯನ್ನು ಕೇಂದ್ರ ಕಛೇರಿಯ ಉಪ ಕೃಷಿ ನಿರ್ದೇಶಕರು (ರೈತ ಸಂಪರ್ಕ ಕೇಂದ್ರ) ಬೆಂಗಳೂರು ಇವರಿಗೆ ಮತ್ತು ಮುಖ್ಯಲೆಕ್ಕಾಧಿಕಾರಿಗಳಿಗೆ ಕಳುಹಿಸತಕ್ಕದ್ದು.
ಅನುಬಂಧ
2022-23 ನೇ ಸಾಲಿನ ರಾಜ್ಯವಲಯ ಲೆಕ್ಕ ಶೀರ್ಷಿಕೆ : 2401-00-001-1-01, ಉಪ ಶೀರ್ಷಿಕೆ: 034 ಕೃಷಿ ಆಯುಕ್ತಾಲಯ (ರೈ.ಸಂ.ಕೇ.ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದಾಸ್ತಾನು ನಿರ್ವಹಣಾ ಸಿಬ್ಬಂದಿ ನಿಯೋಜನೆ ಗೌರವಧನ ಪಾವತಿಗಾಗಿ) (ಆರ್ಥಿಕ: ರೂ.ಲಕ್ಷಗಳಲ್ಲಿ)
ಕ್ರಸಂ | ಜಿಲ್ಲೆಯ ಹೆಸರು | ರೈತ ಸಂಪರ್ಕ ಕೇಂದ್ರಗಳ ಸಂಖ್ಯೆ | ವಾರ್ಷಿಕ ಕಾರ್ಯಕ್ರಮ |
ಬಾಗಲಕೋಟೆ | 18 | 48.99 | |
ಬೆಂಗಳೂರು (ಗ್ರಾ) | 17 | 46.29 | |
ಬೆಂಗಳೂರು (ನ) | 11 | 30.09 | |
ಬೆಳಗಾವಿ | 35 | 94.89 | |
ಬಳ್ಳಾರಿ | 13 | 32.79 | |
ಬೀದರ್ | 30 | 81.39 | |
ಚಾಮರಾಜನಗರ | 16 | 43.59 | |
ಚಿಕ್ಕಬಳ್ಳಾಪುರ | 26 | 70.59 | |
ಚಿಕ್ಕಮಗಳೂರು | 34 | 92.19 | |
ಚಿತ್ರದುರ್ಗ | 22 | 59.79 | |
ದಕ್ಷಿಣ ಕನ್ನಡ | 16 | 43.59 | |
ದಾವಣಗೆರೆ | 20 | 54.39 | |
ಧಾರವಾಡ | 14 | 38.19 | |
ಗದಗ | 11 | 30.09 | |
ಕಲಬುರ್ಗಿ | 32 | 86.79 | |
ಹಾಸನ | 38 | 102.99 | |
ಹಾವೇರಿ | 19 | 51.69 | |
ಕೊಡಗು | 16 | 43.59 | |
ಕೋಲಾರ | 27 | 73.29 | |
ಕೊಪ್ಪಳ | 20 | 54.39 | |
ಮಂಡ್ಯ | 31 | 84.09 | |
ಮೈಸೂರು | 33 | 89.49 | |
ರಾಯಚೂರು | 37 | 100.29 | |
ರಾಮನಗರ | 18 | 48.99 | |
ಶಿವಮೊಗ್ಗ | 40 | 108.39 | |
ತುಮಕೂರು | 50 | 135.39 | |
ಉಡುಪಿ | 9 | 24.69 | |
ಉತ್ತರ ಕನ್ನಡ | 35 | 94.89 | |
ವಿಜಯಪುರ | 20 | 54.39 | |
ಯಾದಗಿರಿ | 16 | 43.59 | |
ವಿಜಯನಗರ | 18 | 51.69 | |
ಒಟ್ಟು 742 | 2015.49 |
ಷರಾ: 2022-23 ನೇ ಸಾಲಿನಲ್ಲಿ ರೈ.ಸಂ. ಕೇಂದ್ರ ಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸೇವೆಯನ್ನು ಈಗಾಗಲೇ ನೀಡಿರುವ ಕಾರ್ಯಕ್ರಮದ ಮಿತಿಯೊಳಗೆ ಅನುಷ್ಟಾನಗೊಳಿಸಲು ತಿಳಿಸಿದೆ
ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಹೊರ ಗುತ್ತಿಗೆ ಸಿಬ್ಬಂದಿಯ ವೇತನ ದರಗಳನ್ನುಕಾರ್ಮಿಕ ಇಲಾಖೆಯ, ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗ ರಲ್ಲಿ ಕಛೇರಿ ಸಿಬ್ಬಂದಿ ಮತ್ತು ವಾಹನ ಚಾಲಕರ ಶಿರೋನಾಮೆಯಡಿ , ಈ ಕೆಳಗೆ ಕೋಷ್ಠಕದಲ್ಲಿ ತಿಳಿಸಿರುವ ಕನಿಷ್ಠ ವೇತನ ದರಗಳಂತೆ ಹಾಗೂ ಕನಿಷ್ಠ ಪಾವತಿ ನಿಯಮಗಳನ್ನು ಅನುಸರಿಸಿ ನಿಯಮಾನುಸಾರ ವೇತನ ದರಗಳನ್ನು ನಿಗದಿಪಡಿಸುವಂತೆ ತಿಳಿಸಿದೆ.
Employment details | Zone-I | Zone-II | Zone-III | Zone-IV | |||||
Senior Clerk, Cashier, Judgment writer, Store Keeper, Receptionist and similar post | Per Day | Per Month | Per Day | Per Month | Per Day | Per Month | Per Day | Per Month | |
Basic VDA Total | 593.28
85.89 625.17 |
14021.27
2233.20 16,254.47 |
513.60
85.89 599.49 |
13353.59
2233.20 15,586.79 |
489.14
85.89 575.03 |
12717.71
2233.20 14,950.91 |
465.85
85.89 551.74 |
12112.10
2233.20 14,345.30 |
- ವಿಸ್ತರಣಾಧಿಕಾರಿಗಳು ಮತ್ತು ರೈತರ ತರಬೇತಿ ಕಾರ್ಯಕ್ರಮ ಲೆಕ್ಕ ಶೀರ್ಷಿಕೆ: 2401-00-109-0-21
ಉ. ಶೀ: 059
ಯೋಜನೆಯ ಉದ್ದೇಶ: ವಿಸ್ತರಣಾಧಿಕಾರಿಗಳ ನಿರ್ವಹಣಾ ಸಾಮರ್ಥ್ಯ ಮತ್ತು ರೈತರ/ ರೈತ ಮಹಿಳೆಯರ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸುವುದು. 2022-23ನೇ ಸಾಲಿನಲ್ಲಿ ತರಬೇತಿಗಾಗಿ ರೂ.30.00ಲಕ್ಷಗಳ ಅನುದಾನವನ್ನು ಒದಗಿಸಲಾಗಿದೆ.
- ರಾಜ್ಯದ ರಾಷ್ರ್ಟೀಯ ಮತ್ತು ಅಂತರ ರಾಷ್ಟ್ರೀಯ ಸಂಸ್ಥೆಗಳಲ್ಲಿ ಆಯೋಜಿಸಲ್ಪಡುವ ವಿವಿಧ ತರಬೇತಿ/ ಕಾರ್ಯಾಗಾರ/ ವಿಚಾರ ಸಂಕೀರ್ಣಿ ಇತ್ಯಾದಿಗಳಿಗೆ ವಿಸ್ತರಣಾಧಿಕಾರಿಗಳನ್ನು ನಿಯೋಜಿಸಲು ತಗಲುವ ತರಬೇತಿ ಶುಲ್ಕ ಮತ್ತು ಇತರೆ ವೆಚ್ಚವನ್ನು ಕೇಂದ್ರ ಕಛೇರಿಯಿಂದ ಭರಿಸಲಾಗುವುದು. ಹೊಸದಾಗಿ ನೇಮಕಗೊಂಡ ಅಥವಾ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಬುನಾದಿ ತರಬೇತಿ / ಪುನಶ್ಚೇತನ ತರಬೇತಿ, ಅಧ್ಯಯನ ಪ್ರವಾಸ ಇತ್ಯಾದಿಗಳಿಗೆ ಕೇಂದ್ರ ಕಛೇರಿಯಿಂದ ಸಂಬಂಧಪಟ್ಟ ತರಬೇತಿ ಕೇಂದ್ರಗಳಿಗೆ / ಜಿಲ್ಲೆಗಳಿಗೆ ಅನುದಾನ ಬಿಡುಗಡೆಮಾಡಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುವುದು.
- ರೈತರು/ರೈತ ಮಹಿಳೆಯರ ಕೃಷಿಯಲ್ಲಿನ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುವಂತೆ ವಿಶೇಷ ತರಬೇತಿಗಳನ್ನು ಆಯೋಜಿಸುವುದು. ಖುಷ್ಕಿ ಬೇಸಾಯ, ವಿವಿಧ ಬೆಳೆಗಳಲ್ಲಿನ ನೂತನ ತಾಂತ್ರಿಕತೆಗಳು, ಸಮಗ್ರ ಕೃಷಿ ಪದ್ದತಿ, ಕೃಷಿ ಸಂಬಂಧಿತ ಉಪ ಕಸುಬುಗಳ ಬಗ್ಗೆ ಕೌಶಲ್ಯಾಧಾರಿತ ತರಬೇತಿ, ಅಧ್ಯಯನ ಪ್ರವಾಸ ಇತ್ಯಾದಿಗಳಿಗೆ ತಗಲುವ ವೆಚ್ಚವನ್ನು ಭರಿಸುವುದು.
- ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಜಿಲ್ಲಾವಲಯ ಲೆಕ್ಕ ಶೀರ್ಷಿಕೆ: 2435-00-101-0-31 (ಯೋಜನೆ) ರಡಿಯಲ್ಲಿನ ಸಾಂಸ್ಥಿಕ ತರಬೇತಿ ಕಾರ್ಯಕ್ರಮಗಳಿಗೆ ನಿಗದಿಪಡಿಸಲಾದ ಅನುದಾನದಲ್ಲಿ ವ್ಯತ್ಯಯ ಉಂಟಾಗುವ ಜಿಲ್ಲೆಗಳಿಗೆ ತರಬೇತಿ ವೆಚ್ಚವನ್ನು ಭರಿಸುವುದು.
- ವಿಶೇಷ ತರಬೇತಿಗಳು:
ಸ್ಥಳೀಯ ಆಯ್ದ ರೈತರು/ ರೈತ ಮಹಿಳೆಯರ ಬೇಡಿಕೆಗಳಿಗೆ ಅನುಗುಣವಾಗಿ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುವಂತೆ ವಿಶೇಷ ತರಬೇತಿಗಳಾದ ಕೃಷಿ ಯಂತ್ರೋಪಕರಣಗಳ ನಿರ್ವಹಣೆ ಮತ್ತು ದುರಸ್ತಿ ( ಟ್ರ್ಯಾಕ್ಟರ್, ಪವರ್ ಟಿಲ್ಲರ್, ಸ್ಪ್ರೇಯರ್ಸ್, ಡೀಸಲ್ ಪಂಪ್ ಸೆಟ್ಸ್ ಇತ್ಯಾದಿ) ಕೃಷಿ ಸಂಬಂಧಿತ ಉಪ ಕಸುಬು/ ಕೃಷಿ ಉದ್ಯಮಗಳು ಸೇರಿದಂತೆ ಜೇನು ಕೃಷಿ, ಕೋಳಿ, ಕುರಿ, ಹಂದಿ, ಮೊಲ ಮತ್ತು ಮೀನು/ಅಲಂಕಾರಿಕ ಮೀನು ಸಾಕಾಣಿಕೆ, ಹೈನುಗಾರಿಕೆ ಬಗ್ಗೆ ಕೌಶಲ್ಯಾಧಾರಿತ ತರಬೇತಿ, ಸಾವಯವ ಕೃಷಿ, ಸೂಕ್ಷ್ಮ ನೀರಾವರಿ, ಭೂಸಮೃದ್ದಿ, ಕೃಷಿ ಯಂತ್ರಧಾರೆ-ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳು ಯೋಜನೆಗಳು ಮುಂಚೂಣಿ ಯೋಜನೆಗಳನ್ನೊಳಗೊಂಡಂತೆ, ತೋಟಗಾರಿಕೆ-ನರ್ಸರಿ/ಸಸಿಮಡಿ ತಯಾರಿಕೆ ಕುರಿತು ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆರು ದಿವಸಗಳ ಅವಧಿಗೆ ತಲಾ 30 ಅಭ್ಯರ್ಥಿಗಳಿಗೆ ಏರ್ಪಡಿಸಬೇಕು. ಸದರಿ ತರಬೇತಿಯನ್ನು ಕಡ್ಡಾಯವಾಗಿ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳ ಜೊತೆ ಚರ್ಚಿಸಿ ಕರಷಿಗೆ ಸಂಬಂಧಿಸಿದ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ನೀಡುವುದು ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಏರ್ಪಡಿಸುವುದು. ಆರು ದಿನಗಳ ತರಬೇತಿ ಅವಧಿಯಲ್ಲಿ ಒಂದು ದಿನವನ್ನು ಕ್ಷೇತ್ರ ಭೇಟಿಗೆ ಮೀಸಲಿರಿಸುವುದು. ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಕನಿಷ್ಟ 20 ಜನ ಅಭ್ಯರ್ಥಿಗಳಿದ್ದಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವುದು.
- ಈ ತರಬೇತಿಗಳಿಗೆ ವಿಷಯಾಧಾರಿತ (Need based curriculum) ಹಾಗೂ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು.
- ವಿಷಯಗಳನ್ನು ಮುಂಚಿತವಾಗಿ ಪಟ್ಟಿ ಮಾಡಿ (Shortlist) ದಿನ ಪತ್ರಿಕೆಗಳಲ್ಲಿ/ ರೈತರ ವಾಟ್ಸ್ ಪ್ ಗುಂಪು/ ಆಕಾಶವಾಣಿ, ಗ್ರಾಮ ಪಂಚಾಯತಿ ಕಚೇರಿಗಳ ಸೂಚನಾ ಫಲಕಗಳಲ್ಲಿ, ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕಗಳಲ್ಲಿ, ತಾಲ್ಲೂಕಿನ ಆತ್ಮ ಸಿಬ್ಬಂದಿ (ATM & BTM) ಮೂಲಕ ವ್ಯಾಪಕ ಪ್ರಚಾರ ನೀಡುವುದು.
- ರೈತರಿಂದ ಅರ್ಜಿಗಳನ್ನು ಆಹ್ವಾನಿಸಿ ತರಬೇತಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು.
- ತರಬೇತಿಗೆ ರೈತರನ್ನು ನೋಂದಾಯಿಸಬೇಕು (Registration) ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮುಂಚಿತವಾಗಿ ಪ್ರಕಟಿಸಬೇಕು.
- ತರಬೇತಿಯ ವಿಷಯ ಸೂಚಿಯನ್ನು(Calender of Activities) ನೀಡುವುದು.
- ಇಲಾಖೆಯಲ್ಲಿನ ಇತರೆ ಎಲ್ಲಾ ಯೋಜನೆಗಳ ತರಬೇತಿ ಕಾರ್ಯಕ್ರಮಗಳನ್ನು ಆಧ್ಯತೆಯ ಮೇರೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಲ್ಲಿ ನಡೆಸುವುದು.
ಪ್ರತಿ ತರಬೇತಿಗೆ ತಗಲುವ ವೆಚ್ಚದ ವಿವರಗಳು (ರೂ.ಗಳಲ್ಲಿ)
ಕ್ರ.ಸಂ | ಆರು ದಿನಗಳ ತರಬೇತಿ | ರೈತರ ತರಬೇತಿ | ಷರಾ |
1 | ಪ್ರಯಾಣ ವೆಚ್ಚ | 6500 | ತರಬೇತಿ ಕಾಲಕ್ಕೆ ಶ್ರವಣ – ದೃಶ್ಯ ಸಾಧನಗಳು, ಮಾದರಿಗಳು ಇತ್ಯಾದಿಗಳನ್ನು ಬಳಸಬೇಕು. ಸಾಧ್ಯವಾದಷ್ಟು ಕ್ಷೇತ್ರ ಭೇಟಿ ಮತ್ತು ಕೌಶಲ್ಯ ಕಲಿಕೆಗೆ ಅವಕಾಶ ನೀಡಬೇಕು. |
2 | ಬೋರ್ಡಿಂಗ್ ವೆಚ್ಚ (200x30X6) | 36000 | |
3 | ಅತಿಥಿ ಉಪನ್ಯಾಸ (ಪ್ರತಿ ಉಪನ್ಯಾಸಕ್ಕೆ ರೂ.500 ರಂತೆ | 7500 | |
4 | ಕ್ಷೇತ್ರ ಭೇಟಿ | 6000 | |
5 | ತರಬೇತಿ ಸಾಮಾಗ್ರಿಗಳು | 1500 | |
ಒಟ್ಟು | 57500 |
ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಲ್ಲಿ ನಡೆಸಿದ ತರಬೇತಿಗಳ ವಿವರಗಳನ್ನು ಪ್ರತಿ ತಿಂಗಳು ದಿನಾಂಕ 5 ರೊಳಗಾಗಿ ಕೇಂದ್ರ ಕಛೇರಿಗೆ ಕಳುಹಿಸಬೇಕು. ತರಬೇತಿ ವಿವರಗಳ ನಮೂನೆಯನ್ನು ಈ ಕೆಳಗಿನಂತೆ ನೀಡಿದೆ.
ಕ್ರ.ಸಂ. | ಯೋಜನೆ | ಲೆ.ಶೀ. | ಅನುದಾನ ಬಿಡುಗಡೆ | ಆರ್ಥಿಕ ಗುರಿ | ಆರ್ಥಿಕ ಸಾಧನೆ | ತರಬೇತಿ ವಿಷಯ | ಹಾಜರಿದ್ದ ರೈತರ/ ಅಧಿಕಾರಿಗಳ ಸಂಖ್ಯೆ/ತಂಡ |
2.ರೈತರಿಗೆ/ ರೈತ ಮಹಿಳೆಯರಿಗೆ ಅಧ್ಯಯನ ಪ್ರವಾಸ
ರೈತ/ರೈತ ಮಹಿಳೆಯರಿಗಾಗಿ ರಾಜ್ಯ ಮಟ್ಟದ ಅಧ್ಯಯನ ಪ್ರವಾಸವನ್ನು ಅರ್ಥಪೂರ್ಣವಾಗಿ ಏರ್ಪಡಿಸಲು ಕ್ರಮವಹಿಸಬೇಕು. ಈ ಪ್ರವಾಸಕ್ಕೆ ಕಡ್ಡಾಯವಾಗಿ ತರಬೇತಿ ಹೊಂದಿರುವ, ಸಂವೇದನಾ ಶೀಲ ಮತ್ತು ಪ್ರಗತಿಪರ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ವಿಜೇತರಿಗೆ ಹೆಚ್ಚಿನ ಆದ್ಯತೆ ನೀಡುವುದು. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ಮೊದಲನೆ ದಿನ ತರಬೇತಿ ಕಾರ್ಯಕ್ರಮದಲ್ಲಿ ಅಭಿಶಿಕ್ಷಣ (Orientation) ತರಬೇತಿ ಏರ್ಪಡಿಸಿ ನಂತರ ಮೂರು ದಿನಗಳನ್ನು ಅಧ್ಯಯನ ಪ್ರವಾಸಕ್ಕಾಗಿ ಹತ್ತಿರದ ಕೃಷಿ ಸಂಶೋಧನಾ ಕೇಂದ್ರಗಳು, ಉತ್ತಮ ಕೃಷಿ ಕ್ಷೇತ್ರಗಳು, ಕೃಷಿ ಪ್ರಶಸ್ತಿ/ ಕೃಷಿ ಪಂಡಿತ ಪ್ರಶಸ್ತಿ/ ಪ್ರಗತಿಪರ ಕೃಷಿಕರ ಕ್ಷೇತ್ರಗಳಿಗೆ ಮತ್ತು ಯಶಸ್ವಿ ಉದ್ದಿಮೆ/ ಕ್ರಿಯಾತ್ಮಕ ಗುಂಪುಗಳು ಇತ್ಯಾದಿ ಸ್ಥಳಗಳಿಗೆ ಪ್ರವಾಸ ಏರ್ಪಡಿಸಬೇಕು. ಪ್ರತಿ ತಂಡದಲ್ಲಿ ಗರಿಷ್ಟ 40 ಅಭ್ಯರ್ಥಿಗಳಿಗೆ ರೂ.115000/- ರವರೆಗೆ ವೆಚ್ಚ ಭರಿಸುವುದು.
ನಾಲ್ಕು ದಿನಗಳ ರೈತರಿಗೆ/ ರೈತ ಮಹಿಳೆಯರಿಗೆ ಅಧ್ಯಯನ ಪ್ರವಾಸದ ವೆಚ್ಚದ ವಿವರ (ರೂ.ಗಳಲ್ಲಿ)
ಕ್ರ.ಸಂ | ವಿವರ | ಮೊತ್ತ |
1. | ವಾಸ್ತವಿಕ ಸಪ್ರಯಾಣ ವೆಚ್ಚ (ಹಳ್ಳಿಯಿಂದ ತರಬೇತಿ ಕೇಂದ್ರಕ್ಕೆ ಹೋಗುವ ವೆಚ್ಚ) | 8,000.00 |
2. | ಅಭಿಶಿಕ್ಷಣ (Orientation) ತರಬೇತಿ ವೆಚ್ಚ (40X1X200) | 8,000.00 |
3. | 50 ಆಸನಗಳುಳ್ಳ ಕೆ.ಎಸ್.ಆರ್.ಟಿ.ಸಿ. ಬಸ್ (ದಿನಕ್ಕೆ ಕನಿಷ್ಟ 350 ಕಿ.ಮೀ.) ರೂ. 33/ಕಿ.ಮೀ.(33*3*350) |
34,650.00 |
4. | ಬೋರ್ಡಿಂಗ್ ವೆಚ್ಚ ಮತ್ತು ವಾಸ್ತವ್ಯ ವೆಚ್ಚ (450X3X40) | 54,000.00 |
5. | ಇತರೆ ವೆಚ್ಚ | 10,350.00 |
ಒಟ್ಟು | 1,15,000.00 |
ಕೆ.ಎಸ್.ಆರ್.ಟಿ.ಸಿ. ವಾಸ್ತವಿಕ ಚಾಲ್ತಿ ದರದನ್ವಯ ನಿಗದಿಪಡಿಸಿದ ವೆಚ್ಚವನ್ನು ಭರಿಸಲು ಬೋರ್ಡಿಂಗ್ ವೆಚ್ಚ ಹೊರತುಪಡಿಸಿ ಇತರೆ ಘಟಕಗಳ ಬಲಾವಣೆಗೆ ಅನುಮತಿಸಿದೆ. ಆದರೆ, ಅಧ್ಯಯನ ಪ್ರವಾಸಕ್ಕೆ ನಿಗದಿಪಡಿಸಿದ ಒಟ್ಟಾರೆ ಮೊತ್ತ ಮೀರದಂತಿರಬೇಕು.
ವಿಶೇಷ ಸೂಚನೆ:
- ಯೋಜನೆಗೆ ನಿಗದಿಪಡಿಸಿರುವ ಒಟ್ಟು ಅನುದಾನದಲ್ಲಿ ಪರಿಶಿಷ್ಟ ಜಾತಿಗೆ ಕನಿಷ್ಟ15%, ಪರಿಶಿಷ್ಟ ಪಂಗಡಕ್ಕೆ 6.950%, ಮಹಿಳೆಯರಿಗೆ ಕನಿಷ್ಟ 33% ಮತ್ತು ಅಲ್ಪಸಂಖ್ಯಾತರಿಗೆ ಕನಿಷ್ಟ 15% ರಷ್ಟು ವೆಚ್ಚ ಭರಿಸಬೇಕು.
- ಮಾಹೆವಾರು ಪ್ರಗತಿ ವರದಿಯನ್ನು ಸಲ್ಲಿಸುವಾಗ ಎಸ್.ಸಿ. ಎಸ್.ಟಿ. ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಭರಿಸಿದ ವೆಚ್ಚವನ್ನು ತಪ್ಪದೇ ನಮೂದಿಸಬೇಕು
- ಅತಿಥಿ ಉಪನ್ಯಾಸಕರನ್ನು ಕರೆತರಲು ತರಬೇತಿ ಕೇಂದ್ರದಲ್ಲಿ ವ್ಯಾಹನ ವ್ಯವಸ್ಥೆ ಇಲ್ಲದಿದ್ದಲ್ಲಿ, ಅತಿಥಿ ಉಪನ್ಯಾಸಕರಿಗೆ ವಾಸ್ತವಿಕ ಪ್ರಯಾಣ ವೆಚ್ಚವನ್ನು ನೀಡುವುದು.
- ಸಾಂಸ್ಥಿಕ ತರಬೇತಿ ಘಟಕದ ವೆಚ್ಚ ಭರಿಸುವಾಗ ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು– ಜಿಲ್ಲಾ ಅಡಿಯಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪರಿಪಾಲಿಸತಕ್ಕದ್ದು.
- ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಲ್ಲಿ 3 ದಿನಗಳ ಸಾಂಸ್ಥಿಕ ತರಬೇತಿಗಳನ್ನು ರಥರು/ವಿಸ್ತರಣಾ ಕಾರ್ಯಕರ್ತರಿಗೆ ಈಗಾಗಲೇ ನೀಡುತ್ತಿದ್ದು, ಸದರಿ ತರಬೇತಿಗಳಿಗೆ ಪ್ರತಿ ತಂಡದಲ್ಲಿ 30 ರೈತರು/ವಿಸ್ತರಣಾ ಕಾರ್ಯಕರ್ತರಿಗೆ ಕ್ರಮವಾಗಿ ರೂ.36000/- ಮತ್ತು 29,500/-ಗಳ ಅನುದಾನವನ್ನು ನಿಗದಿಪಡಿಸಲಾಗಿರುತ್ತದೆ.
ಲೆಕ್ಕ ಶೀರ್ಷಿಕೆ: 2401-00- 109-0-21 ಉ. ಶೀ: 059 (ಭೌತಿಕ–ಸಂಖ್ಯೆ, ಆರ್ಥಿಕ- ರೂ. ಲಕ್ಷಗಳಲ್ಲಿ)
ಕ್ರ.ಸಂ
|
ಜಿಲ್ಲೆ
|
ವಿಶೇಷ | ಸಾಂಸ್ಥಿಕ ತರಬೇತಿ | ಒಟ್ಟು | |||||
ರೈತರು | ವಿ.ಕಾ | ||||||||
ಭೌ | ಆ | ಭೌ | ಆ | ಭೌ | ಆ | ಭೌ | ಆ | ||
1 | ಬಾಗಲಕೋಟೆ | 30 | 0.575 | 60 | 0.72 | 30 | 0.295 | 120 | 1.590 |
2 | ಬೆಂಗಳೂರು(ಗ್ರಾ) | 0 | 0 | 30 | 0.36 | 30 | 0.295 | 60 | 0.655 |
3 | ಬೆಂಗಳೂರು (ನ) | 30 | 0.575 | 30 | 0.36 | 30 | 0.295 | 90 | 1.230 |
4 | ಬೆಳಗಾವಿ | 30 | 0.575 | 60 | 0.72 | 30 | 0.295 | 120 | 1.590 |
5 | ಬಳ್ಳಾರಿ | 30 | 0.575 | 60 | 0.72 | 30 | 0.295 | 120 | 1.590 |
6 | ಬೀದರ್ | 30 | 0.575 | 30 | 0.36 | 30 | 0.295 | 90 | 1.230 |
7 | ವಿಜಯಪುರ | 30 | 0.575 | 30 | 0.36 | 30 | 0.295 | 90 | 1.230 |
8 | ಚಿಕ್ಕಬಳ್ಳಾಪುರ | 30 | 0.575 | 30 | 0.36 | 30 | 0.295 | 90 | 1.230 |
9 | ಚಿಕ್ಕಮಗಳೂರು | 30 | 0.575 | 30 | 0.36 | 30 | 0.295 | 90 | 1.230 |
10 | ಚಿತ್ರದುರ್ಗ | 30 | 0.575 | 30 | 0.36 | 30 | 0.295 | 90 | 1.230 |
11 | ದಕ್ಷಿಣ ಕನ್ನಡ | 30 | 0.575 | 30 | 0.36 | 30 | 0.295 | 90 | 1.230 |
12 | ದಾವಣಗೆರೆ | 30 | 0.575 | 30 | 0.36 | 30 | 0.295 | 90 | 1.230 |
13 | ಧಾರವಾಡ | 30 | 0.575 | 30 | 0.36 | 30 | 0.295 | 90 | 1.230 |
14 | ಕಲಬುರಗಿ | 30 | 0.575 | 30 | 0.36 | 30 | 0.295 | 90 | 1.230 |
15 | ಹಾಸನ | 30 | 0.575 | 30 | 0.36 | 30 | 0.295 | 90 | 1.230 |
16 | ಹಾವೇರಿ | 30 | 0.575 | 30 | 0.36 | 30 | 0.295 | 90 | 1.230 |
17 | ಕೊಡಗು | 30 | 0.575 | 30 | 0.36 | 30 | 0.295 | 90 | 1.230 |
18 | ಕೊಪ್ಪಳ | 30 | 0.575 | 30 | 0.36 | 30 | 0.295 | 90 | 1.230 |
19 | ಮಂಡ್ಯ | 30 | 0.575 | 30 | 0.36 | 30 | 0.295 | 90 | 1.230 |
20 | ಮೈಸೂರು | 30 | 0.575 | 30 | 0.36 | 30 | 0.295 | 90 | 1.230 |
21 | ರಾಯಚೂರು | 30 | 0.575 | 30 | 0.36 | 30 | 0.295 | 90 | 1.230 |
22 | ಶಿವಮೊಗ್ಗ | 30 | 0.575 | 30 | 0.36 | 30 | 0.295 | 90 | 1.230 |
23 | ತುಮಕೂರು | 30 | 0.575 | 30 | 0.36 | 30 | 0.295 | 90 | 1.230 |
24 | ಉತ್ತರ ಕನ್ನಡ | 30 | 0.575 | 30 | 0.36 | 30 | 0.295 | 90 | 1.230 |
ಒಟ್ಟು | 690 | 13.225 | 810 | 9.72 | 720 | 7.080 | 2220 | 30.025 |
ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳ ನಿರ್ವಹಣೆ ( ಸಾಮಾಗ್ರಿಗಳ)ಉ. ಶಿ.:200
ರಾಜ್ಯ ವಲಯದ ಕಾರ್ಯಕ್ರಮದಲ್ಲಿ 2022-23 ನೇ ಸಾಲಿಗೆ ರೂ. 77.00 ಲಕ್ಷ ಅನುದಾನ ಒದಗಿಸಿದ್ದು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳ ನಿರ್ವಹಣೆ ವೆಚ್ಚ (ಸಾಮಾಗ್ರಿಗಳ ಖರೀದಿ, ಸೌರಶಕ್ತಿ ಉಪಕರಣಗಳ ನಿರ್ವಹಣೆ, ಮಳೆ ನೀರು ಕೊಯ್ಲು ನಿರ್ವಹಣೆ ಪರಿಣಾಮಕಾರಿ ತರಬೇತಿಗೆ ಬೇಕಾಗುವ ಪೂರಕ ಸಾಮಾಗ್ರಿಗಳ ಖರೀದಿ, ತರಬೇತಿ ಕೇಂದ್ರ ಹಾಗೂ ವಸತಿ ನಿಲಯಗಳ ನಿರ್ವಹಣೆ ಉದಾ:ಸಣ್ಣ ಪುಟ್ಟ ಕಿಟಕಿ ರೀಪೇರಿ, ಕೊಳಾಯಿ, ವಿದ್ಯುತ್, ಅಡುಗೆ ಕೋಣೆ ರಿಪೇರಿ ಕಾರ್ಯ, ಸ್ವಚ್ಛತೆ ಕಾರ್ಯ ಇತ್ಯಾದಿ) ಮತ್ತು ಕಚೇರಿ ವೆಚ್ಚಕ್ಕಾಗಿ ಒದಗಿಸಿಕೊಂಡಿರುವ ಅನುದಾನದ ವಿವರವನ್ನು ಈ ಕೆಳಗೆ ನೀಡಲಾಗಿದೆ. (ಆರ್ಥಿಕ ರೂ.ಗಳಲ್ಲಿ)
ಕ್ರ.ಸಂ | ಜಿಲ್ಲೆ | ಕಛೇರಿ ವೆಚ್ಚ ಮತ್ತು ತರಬೇತಿ ಕೇಂದ್ರಗಳ ನಿರ್ವಹಣೆ ವೆಚ್ಚ |
1 | ಬಾಗಲಕೋಟೆ | 4.00 |
2 | ಬೆಂಗಳೂರು (ನ) | 2.00 |
3 | ಬೆಳಗಾವಿ | 4.00 |
4 | ಬಳ್ಳಾರಿ | 4.00 |
5 | ಬೀದರ್ | 4.00 |
6 | ವಿಜಯಪುರ | 4.00 |
7 | ಚಿಕ್ಕಬಳ್ಳಾಪುರ | 3.00 |
8 | ಚಿಕ್ಕಮಗಳೂರು | 3.00 |
9 | ಚಿತ್ರದುರ್ಗ | 2.00 |
10 | ದಕ್ಷಿಣ ಕನ್ನಡ | 3.00 |
11 | ದಾವಣಗೆರೆ | 3.00 |
12 | ಧಾರವಾಡ | 4.00 |
13 | ಕಲಬುರಗಿ | 3.00 |
14 | ಹಾಸನ | 3.00 |
15 | ಹಾವೇರಿ | 4.00 |
16 | ಕೊಡಗು | 3.00 |
17 | ಕೊಪ್ಪಳ | 3.00 |
18 | ಮಂಡ್ಯ | 4.00 |
19 | ಮೈಸೂರು | 3.00 |
20 | ರಾಯಚೂರು | 4.00 |
21 | ಶಿವಮೊಗ್ಗ | 4.00 |
22 | ತುಮಕೂರು | 4.00 |
23 | ಉತ್ತರ ಕನ್ನಡ | 2.00 |
ಒಟ್ಟು | 77.00 |
- ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳ ಉನ್ನತೀಕರಣ ಉ.ಶೀ:059
2022 -23 ನೇ ಸಾಲಿಗೆ ಒದಗಿಸಿರುವ ಒಟ್ಟು ಅನುದಾನ ರೂ.60.00 ಲಕ್ಷಗಳು
ನಿಗದಿತ ರೂ.60.00 ಲಕ್ಷಗಳ ಅನುದಾನವನ್ನು ಕೇಂದ್ರ ಕಚೇರಿಯಲ್ಲಿ ಮೀಸಲಿರಿಸಿ ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳ ಬೇಡಿಕೆಗನುಗುಣವಾಗಿ ಹಾಗೂ ಅವಶ್ಯಕತೆಗನುಗುಣವಾಗಿ ಬಿಡುಗಡೆ ಮಾಡಲಾಗುವುದು.
ಆದ್ಯತೆಯ ಮೇಲೆ ಕೈಗೊಳ್ಳಬೇಕಾಗುವ ಕಾಮಗಾರಿಗಳ ವಿವರ:
- ನೂತನ ಕಟ್ಟಡ ನಿರ್ಮಾಣ/ ನಿರ್ವಹಣೆ
- ಹಾಸ್ಟೆಲ್ ಕಟ್ಟಡ ನಿರ್ಮಾಣ/ನಿರ್ವಹಣೆ
- ಮೂರು ಅಭ್ಯರ್ಥಿಗಳಿಗೆ ಒಂದು ಕೊಠಡಿಯಂತೆ ಪ್ರತಿ ಕೊಠಡಿಗೆ ಶೌಚಾಲಯವಿರುವ ಕನಿಷ್ಟ 10
ಕೊಠಡಿಗಳು
- ಅಡಿಗೆ ಮನೆ ಮತ್ತು ಉಗ್ರಾಣ ಕೊಠಡಿ
- ಊಟದ ಕೊಠಡಿ
- ಶೌಚಾಲಯ
- ಆಟದ ಮೈದಾನ ಮತ್ತು ಇತರೆ.
- ನೀರಿನ ನೀರಿನ ಸೌಲಭ್ಯ ದಗಿಸುವ ಕಾಮಗಾರಿಗಳು.
- ಕೊಳವೆ ಬಾವಿ
- ನೀರಿನ ಸರಬರಾಜು ಮಾಡಲು ಬೇಕಾಗುವ ಸಾಮಾಗ್ರಿಗಳು.
- ಟ್ಯಾಂಕ್ ನಿರ್ಮಾಣ ಇತ್ಯಾದಿ
4.ಸೌರಶಕ್ತಿಯ ಬಳಕೆಯ ಕಾಮಗಾರಿಗಳ/ ನಿರ್ವಹಣೆ
- ಬೀದಿ ದೀಪ
- ವಾಟರ್ ಹೀಟರ್ಸ್ / ಸೋಲಾರ್ ಕುಕ್ಕರ್ (ಓವನ್)
- ಸೌರ ಶಕ್ತಿ ದೀಪಗಳು/ ಲ್ಯಾಂಟರ್ಸ್/U.P.S/ನೀರೆತ್ತುವ ಪಂಪ್ ಇತ್ಯಾದಿ.
- ತರಬೇತಿ ಕೇಂದ್ರ ನಿರ್ಮಾಣ ಘಟಕದಡಿಯಲ್ಲಿ
- ಸಹಾಯಕ ಕೃಷಿ ನಿರ್ದೇಶಕ ಕಛೇರಿ
- ಭೋದಕರ ಕೊಠಡಿ
- ಗ್ರಂಥಾಲಯ
- ವಸ್ತು ಸಂಗ್ರಹಾಲಯ
- ಸಿಬ್ಬಂದಿ ಕೊಠಡಿ
- ಸಂಭಾಗಣ/ಸೆಮಿನಾರ್ ಹಾಲ್
- ಮನೊರಂಜನಾ ಕೊಠಡಿ ಮತ್ತು ಆಟದ ಸಾಮಗ್ರಿಗಳು
- ಕಾರಿಡಾರ್ ಇತ್ಯಾದಿ
ಪರಿಣಾಮಕಾರಿ ತರಬೇತಿಗೆ ಪೂರಕವಾದ ಬೋಧನಾ ಸಾಮಗ್ರಿಗಳು ನಿಯಮಾನುಸಾರ ಖರೀದಿಸುವುದು.
- ಶ್ರವಣ ದೃಶ್ಯ ಸಾಮಗ್ರಿಗಳು
- ಗಣಕಯಂತ್ರ, ಜೆರಾಕ್ಸ್ ಯಂತ್ರ, ಫ್ಯಾಕ್ಸ್ ಯಂತ್ರ, ಲ್ಯಾಪ್ ಟಾಪ್ ಡಿಜಿಟಲ್ ಕ್ಯಾಮೆರಾ, ಇತ್ಯಾದಿ.
- ದೂರವಾಣಿ ಇತ್ಯಾದಿ
- ವಾಹನ ಸೌಲಭ್ಯ
- ಅಭ್ಯರ್ಥಿಗಳಿಗೆ ವಾಹನ ಸೌಲಭ್ಯ ಒದಗಿಸುವುದು (ಕ್ಷೇತ್ರ ಭೇಟಿ)
- ರೈತರಿಗೆ ರೈತ ಮಹಿಳೆಯರಿಗೆ ತರಬೇತಿ ಕೇಂದ್ರಕ್ಕೆ ಬಂದು ಹೋಗಲು ಮತ್ತು ಕ್ಷೇತ್ರ ಭೇಟಿಗೆ ಅನುಕೂಲವಾಗುವಂತೆ ವಾಹನ ಸೌಲಭ್ಯ ಒದಗಿಸುವುದು ( 30 ಆಸನವುಳ್ಳ ವಾಹನ)
- ತರಬೇತಿ ಕೇಂದ್ರದ ಬೋದನಾ ಕೊಠಡಿ, ಗ್ರಂಥಾಲಯ ಮತ್ತು ಗ್ರಂಥಾಲಯಕ್ಕೆ ಪೂರಕವಾದ ಪೀಠೋಪಕರಣಗಳನ್ನು ಒದಗಿಸುವುದು ಮತ್ತು ಸಂಗ್ರಹಾಲಯಕ್ಕೆ ಪೂರಕವಾದ ಪೀಠೋಪಕರಣಗಳನ್ನು ಒದಗಿಸುವುದು
- ವಸತಿ ಗೃಹಗಳ ನಿರ್ಮಾಣ /ನಿರ್ವಹಣೆ
- ಮಳೆ ನೀರು ಕೊಯ್ಲು ಕಾಮಗಾರಿ
- ತರಬೇತಿ ಕೇಂದ್ರದ ವರಣದಲ್ಲಿ ಕೈಗೊಳ್ಳಬೇಕಾಗಿರುವ ಅಹ್ಲಾದಕರ ವಾತಾವರಣ ಉಂಟು ಮಾಡುವ ಅಲಂಕಾರಿಕ
- ತರಬೇತಿ ಕೇಂದ್ರದ ರಸ್ತೆ ಕಾಮಗಾರಿ.
- ತರಬೇತಿ ಕೇಂದ್ರದಲ್ಲಿ ಅಗತ್ಯವಿರುವ ಇತರೆ ಪೂರಕ ಸಾಮಾಗ್ರಿಗಳ ಖರೀದಿ
ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಲ್ಲಿ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳ ವಿವರಗಳು.
ಜಿ.ಕೃ.ತ.ಕೇಂದ್ರದ ಹೆಸರು: ಅಂಚೆ ವಿಳಾಸ
ನಮೂನೆ
ಕ್ರ.ಸಂ | ಕಾಮಗಾರಿ ಹೆಸರು | ಅಂದಾಜು ಮೊತ್ತ | ಷರಾ /ಸ್ಪಷ್ಟೀಕರಣ |
ಮಹಾ ಮೊತ್ತ |
ತರಬೇತಿ ಕೇಂದ್ರದ ಮುಖ್ಯಸ್ಥರ ಸಹಿ
ಸೂಚನೆ: ಆದ್ಯತೆ ಮೇರೆಗೆ ಕಾಮಗಾರಿಯ ಆಯ್ಕೆಯ ಕುರಿತು ಸ್ಪಷ್ಟೀಕರಣವನ್ನು ಷರಾ ಕಾಲಂನಲ್ಲಿ ನಮೂದಿಸುವುದು. ಕಾಮಗಾರಿಗಳನ್ನು ಕೆಳಕಂಡಂತೆ ವರ್ಗೀಕರಣ ಮಾಡತಕ್ಕದ್ದು.
- ತರಬೇತಿ ಕೇಂದ್ರದ ಕಾಮಗಾರಿಗಳು
- ಹಾಸ್ಟಲ್ ಕಾಮಗಾರಿಗಳು
- ಸೌರಶಕ್ತಿ ಬಳಕೆಯ ಕಾಮಗಾರಿಗಳು
- ಕುಡಿಯುವ ನೀರಿನ ಸೌಲಭ್ಯಗಳ ಕಾಮಗಾರಿಗಳು
- ಶ್ರವಣ ದೃಶ್ಯ ಸಾಧನಗಳು
- ವಾಹನ ಸೌಲಭ್ಯಗಳು
- ಕಾಮಗಾರಿಯ ವರ್ಗೀಕರಣ ಅನ್ವಯ ಅಂದಾಜು ಮೊತ್ತದ ಮಾಹಿತಿ ಹಾಗೂ ಮಹಾ ಮೊತ್ತವನ್ನು ನಮೂದಿಸಬೇಕು.
For more details visit official website