Organic Farming

0
249
Organic Farming

. 2022-23 ನೇ ಸಾಲಿನ ಸಾವಯವ ಕೃಷಿ ಮತ್ತು ಸಿರಿಧಾನ್ಯ ಕಾರ್ಯಕ್ರಮಗಳು

ಪೀಠಿಕೆ:

ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಸರ್ಕಾರವು 2004-05ನೇ ಸಾಲಿನಲ್ಲಿಯೇ ಸಾವಯವ ಕೃಷಿ ನೀತಿಯನ್ನು ಹೊರತಂದಿದ್ದು, ಈ ನೀತಿಯಡಿ ರಾಜ್ಯವು ಅನೇಕ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸುತ್ತಾ ಬಂದಿದೆ. ಸಾವಯವ ಕೃಷಿ ನೀತಿ 2004 ರಡಿ ರಾಜ್ಯದಲ್ಲಿ ಅನುಷ್ಠಾನದಲ್ಲಿದ್ದ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳು ಜೀವವೈವಿದ್ಯತೆ ಸಂರಕ್ಷಣೆ, ಮಿಶ್ರ ಬೇಸಾಯ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸ್ಥಳೀಯವಾಗಿ ಸಾವಯವ ಗೊಬ್ಬರ ಉತ್ಪಾದನೆ, ಭೂಮಿಯ ಪುನರುಜ್ಜೀವನ ಇತ್ಯಾದಿಗಳು ಸೇರಿದಂತೆ ಒಟ್ಟಾರೆಯಾಗಿ ಸಾವಯವ ಕೃಷಿ ಪದ್ಧತಿಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದರ ಜೊತೆಗೆ ಸಾವಯವ ಕೃಷಿಯು ಅತ್ಯುತ್ತಮ ಸುಸ್ಥಿರ ಉತ್ಪಾದನಾ ಪದ್ಧತಿಯೆಂದು ರೈತರಿಗೆ ಮನವರಿಕೆ ಮಾಡಿಕೊಡುವುದು ಯೋಜನೆಗಳ ಮುಖ್ಯ ಉದ್ದೇಶವಾಗಿತ್ತು. ಈವರೆವಿಗಿನ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳು ಅಂದಿನ ಉದ್ದೇಶಗಳನ್ನು ತಲುಪಲು ಸಾಧ್ಯವಾಗಿರುತ್ತದೆ. ಆದರೆ, ಸಾವಯವ ಕೃಷಿ ಉತ್ಪನ್ನಗಳ ಬಗೆಗಿನ ಅರಿವಿನಿಂದಾಗಿ ಉಂಟಾಗಿರುವ ಬೇಡಿಕೆಯನ್ನು ಪೂರೈಸುವಲ್ಲಿ ಹಾಗೂ ಈ ಬೇಡಿಕೆಯಿಂದಾಗಿ ಉತ್ಪನ್ನಗಳ ಗುಣಮಟ್ಟ ಕಾಪಾಡುವಲ್ಲಿ ಕೆಲವೊಂದು ನ್ಯೂನ್ಯತೆಗಳನ್ನು ಸೃಷ್ಟಿಸಿವೆ. ಈ ನ್ಯೂನ್ಯತೆಗಳನ್ನು ಸರಿಪಡಿಸಲು ಸದರಿ ನೀತಿಯನ್ನು ಮಾರುಕಟ್ಟೆ ಆಧಾರಿತ ಚಟುವಟಿಕೆಗಳ ಸೇರ್ಪಡೆಯೊಂದಿಗೆ ಪರಿಷ್ಕರಿಸಿ ಸಾವಯವ ಕೃಷಿ ನೀತಿ, 2017 ಹೊರತರಲಾಗಿದ್ದು, ಸದರಿ ನೀತಿಯಡಿ ಅನೇಕ ಮಾರುಕಟ್ಟೆ ಸಂಬಂಧಿತ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿರುತ್ತದೆ.

2022-23 ನೇ ಸಾಲಿನಲ್ಲಿ ಕೆಳಕಂಡ ಸಾವಯವ ಕೃಷಿ ಮತ್ತು ಸಿರಿಧಾನ್ಯ   ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.

 ಸಾವಯವ ಕೃಷಿ – ಆಡಳಿತಾತ್ಮಕ ಮತ್ತು ಉತ್ತೇಜನ ಕಾರ್ಯಕ್ರಮಗಳು

2401-00-104-0-12 (059)

2022-23 ನೇ ಸಾಲಿನಲ್ಲಿ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಒಟ್ಟು ರೂ.500.00 ಲಕ್ಷಗಳ ಅನುದಾನವನ್ನು ಒದಗಿಸಲಾಗಿದ್ದು, ಈ ಅನುದಾನದಲ್ಲಿ      ರಾಜ್ಯದ ಸಾವಯವ ಪ್ರಮಾಣೀಕೃತ ಪ್ರದೇಶವನ್ನು   ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಾವಯವ ಕೃಷಿ/ನೈಸರ್ಗಿಕ ಕೃಷಿಯನ್ನು ಅನುಸರಿಸುತ್ತಿರುವ ಅರ್ಹ ವ್ಯಕ್ತಿಗತ/ ಗುಂಪುಗಳ ಪ್ರದೇಶವನ್ನು  ಕರ್ನಾಟಕ ರಾಜ್ಯ ಸಾವಯವ ಪ್ರಮಾಣಿಕರಣ (KSSOCA) ಸಂಸ್ಥೆಯ ಮುಖಾಂತರ ಸಾವಯವ ಪ್ರಮಾಣೀಕರಣಕ್ಕೆ ನೋಂದಾಯಿಸಿ ಪ್ರಮಾಣೀಕರಣದ ಶುಲ್ಕ ಭರಿಸುವುದರೊಂದಿಗೆ ಅವರ ಕ್ಷೇತ್ರವನ್ನು ಪ್ರಮಾಣೀಕರಣದ  ವ್ಯಾಪ್ತಿಗೆ ಒಳಪಡಿಸುವ  ಕಾರ್ಯಕ್ರಮವನ್ನು 2022-23 ನೇ ಸಾಲಿನಲ್ಲಿ ಮುಂದುವರೆಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಆಸಕ್ತ ಸಾವಯವ ಕೃಷಿಕರು/ಗುಂಪುಗಳಿಂದ ಪ್ರಸ್ತಾವನೆಗಳನ್ನು ಪಡೆದು KSSOCA ಸಂಸ್ಥೆಗೆ ನೇರವಾಗಿ ಸಲ್ಲಿಸುವುದು.

ಸಾವಯವ ಕೃಷಿಯಲ್ಲಿ ಪ್ರಚಾರ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳು,ಜಾಲತಾಣ/ ಇ-ಮಾರುಕಟ್ಟೆ ಪ್ಲಾಟ್ ಫಾರಂ ಅಭಿವೃದ್ದಿ,  ಸಾವಯವ ಉತ್ಪನ್ನಗಳ ಗುಣನಿಯಂತ್ರಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು, ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಕಾರ್ಯಕ್ರಮಗಳು-ತಾಲ್ಲೂಕು/ಜಿಲ್ಲೆ/ರಾಜ್ಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ತರಬೇತಿ/ಕಾರ್ಯಾಗಾರ/ಮೇಳ/ವಸ್ತು ಪ್ರದರ್ಶನ ಇನ್ನಿತರೆ ಸಂಬಂಧಿತ ಕಾರ್ಯಕ್ರಮಗಳ ಆಯೋಜನೆ/ ಭಾಗವಹಿಸುವಿಕೆ. ಈ ಸಂಬಂಧದ ಸುತ್ತೋಲೆಯನ್ನು ನಂತರದ ದಿನಗಳಲ್ಲಿ ನೀಡಲಾಗುವುದು.

2021-22 ನೇ ಸಾಲಿನ ಆಯವ್ಯಯದಲ್ಲಿನ ಹೊಸ ಸಾವಯವ ಕೃಷಿ ಕಾರ್ಯಕ್ರಮವಾದ “ಸಾವಯವ ಸಿರಿ” ಯೋಜನೆಯನ್ನು ಸರ್ಕಾರದ ಆದೇಶದನ್ವಯ ಪ್ರಾರಂಭಿಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಕಾರ್ಯಕ್ರಮವನ್ನು ಮುಂದುವರೆಸಲಾಗಿದೆ. ಸದರಿ ಯೋಜನೆಯಡಿ ಸಾವಯವ ಕೃಷಿಯಲ್ಲಿ ಸಾಮಾರ್ಥ್ಯಾಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾದ ತಲಾ ರೂ.10.00ಲಕ್ಷ ಅನುದಾನವನ್ನು ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಸಾಮಾಜಿಕ ಸಂಸ್ಥೆಯ ಮುಖಾಂತರ ಕ್ಷೇತ್ರ ಮಟ್ಟದ ಸಾವಯವ ಕೃಷಿಕರಿಗೆ/ರೈತರಿಗೆ ಇಲಾಖೆ ಹಾಗೂ ಸಾಮಾಜಿಕ ಸಂಸ್ಥೆಯು ಜಂಟಿಯಾಗಿ ಈ ಕೆಳಕಂಡಂತೆ ಆಯೋಜಿಸಲು ಕ್ರಮವಹಿಸುವುದು.

ತರಬೇತುದಾರರ ಆಯ್ಕೆ:

  • ತರಬೇತಿ ಆಯೋಜನೆ ಕುರಿತಂತೆ ಕಡ್ಡಾಯವಾಗಿ ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಅರ್ಹ ಆಸಕ್ತ ರೈತರು ತರಬೇತಿಯ ಪ್ರಯೋಜನ ಪಡೆದುಕೊಳ್ಳುವಂತೆ ಕ್ರಮ ವಹಿಸುವುದು.
  • ಪ್ರತಿ ಸಾಮಾಜಿಕ ಸಂಸ್ಥೆಯ ವ್ಯಾಪ್ತಿಯಲ್ಲಿ ಕನಿಷ್ಠ 75% ಯುವಕರು ಮತ್ತು ಮಹಿಳಾ ರೈತರುಗಳು ಪಾಲ್ಗೊಳ್ಳುವಿಕೆಗೆ ಒತ್ತು ನೀಡುವುದು.

ತರಬೇತಿಗಳ ಆಯೋಜನೆ:

  • ಪ್ರತಿ ಸಾಮಾಜಿಕ ಸಂಸ್ಥೆಯ ವ್ಯಾಪ್ತಿಯಲ್ಲಿ ಹೊಸದಾಗಿ ಸಾವಯವ ಕೃಷಿ / ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಯುವಕ ರೈತರು, ಮಹಿಳೆಯರು ಹಾಗೂ ಸಾವಯವ ಕೃಷಿ/ನೈಸರ್ಗಿಕ ಕೃಷಿಯಲ್ಲಿ ಈ ಹಿಂದೆ ತರಬೇತಿ ಪಡೆಯದೇ ಇರುವ ಆಸಕ್ತ ರೈತರು ಸೇರಿದಂತೆ ಕನಿಷ್ಠ 200 ರೈತರಿಗೆ 2 ದಿನಗಳ 2 ತರಬೇತಿ ಕಾರ್ಯಕ್ರಮಗಳನ್ನು ಒಂದು ತಿಂಗಳ ಅಂತರದಲ್ಲಿ ಆಯೋಜಿಸುವುದು.
  • ತರಬೇತಿಯನ್ನು ಆ ವ್ಯಾಪ್ತಿಯ ಕೃವಿವಿಗಳ ಸಾವಯವ ಕೃಷಿ ವಿಭಾಗದ ವಿಜ್ಞಾನಿ, ನೈಸರ್ಗಿಕ ವಿಜ್ಞಾನಿ ಮತ್ತು ಸ್ಥಳೀಯ ಕೆವಿಕೆಗಳ ಸಹಯೋಗದಿಂದ ಪ್ರಾತ್ಯಕ್ಷಿಕೆಯೊಂದಿಗೆ ಆಯೋಜಿಸುವುದು.
  • ಪ್ರತಿ ರೈತರಿಗೆ ಪ್ರತಿ ದಿನಕ್ಕೆ ರೂ.500/-ರಂತೆ ತರಬೇತಿ ವೆಚ್ಚ ನೀಡಲಾಗುವುದು. ಇದರಲ್ಲಿ ತರಬೇತಿಗೆ ಹಾಜರಾಗುವ ರೈತರಿಗೆ ಬಂದು ಹೋಗುವ ಪ್ರಯಾಣ ವೆಚ್ಚ, ತರಬೇತಿಗೆ ಹಾಜರಾಗುವ ರೈತರಿಗೆ ಕಾಫಿ/ಟೀ, ತಿಂಡಿ ಮತ್ತು ಊಟ, ತರಬೇತಿ ಸಾಮಗ್ರಿಗಳು, ಸಾಧನಗಳು, ಲೇಖನ ಸಾಮಗ್ರಿ/ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಧನ, ತಾಂತ್ರಿಕ ಮಾಹಿತಿಯ ಜೆರಾಕ್ಸ್ ಮತ್ತು ತರಬೇತಿ ಆಯೋಜನೆಗೆ ಪೂರಕವಾದ ಇನ್ಯಾವುದೇ ವೆಚ್ಚಗಳನ್ನು ಈ ಅನುದಾನದಲ್ಲಿ ಭರಿಸುವುದು.
  • ಆಯೋಜಿಸಲಾದ ಎರಡೂ ತರಬೇತಿಯಲ್ಲಿ ಭಾಗವಹಿಸಿದ ರೈತರನ್ನೊಳಗೊಂಡಂತೆ ಸಾವಯವ ಮತ್ತು ಸಿರಿಧಾನ್ಯ ಉತ್ಪಾದಕರ-ಮಾರುಕಟ್ಟೆದಾರರ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

ಮೊದಲನೇ ತರಬೇತಿಯ ವಿಷಯಗಳುಃ

  • ಸಾವಯವ ಕೃಷಿ ಪರಿಕಲ್ಪನೆ, ಸಾವಯವ ಕೃಷಿ ಏಕೆ? ತತ್ವಗಳು ಮತ್ತು ಮುಖ್ಯ ಅವಶ್ಯಕತೆಗಳು ಇತ್ಯಾದಿ.
  • ಎರೆಹುಳು ಗೊಬ್ಬರ ತಯಾರಿಕೆ ಮತ್ತು ವಿವಿಧ ಪದ್ಧತಿಯಲ್ಲಿ ಕಾಂಪೋಸ್ಟ್ ತಯಾರಿಕೆ – ಪ್ರಾತ್ಯಕ್ಷಿಕೆಯೊಂದಿಗೆ.
  • ಸಾವಯವ ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ, ಸಂಪದ್ಬರಿತ ಕಾಂಪೋಸ್ಟ್ ಎಣ್ಣೆ ಹಿಂಡಿಗಳ ಬಳಕೆ. ಜೈವಿಕ ಗೊಬ್ಬರಗಳ ಬಳಕೆ, ಜೀವ ಚೈತನ್ಯ ತಯಾರಿಕೆಗಳು, ದ್ರವರೂಪದ ಗೊಬ್ಬರಗಳು, ಪಂಚಗವ್ಯ ತಯಾರಿಕೆ ಇತ್ಯಾದಿ – ಪ್ರಾತ್ಯಕ್ಷಿಕೆಯೊಂದಿಗೆ.
  • ಸಾವಯವ ಕೃಷಿಯಲ್ಲಿ ಕೀಟಗಳ ನಿರ್ವಹಣೆ – ಜೈವಿಕ ಪೀಡೆನಾಶಕಗಳು, ಪರಭಕ್ಷಕ ಮತ್ತು ಪರತಂತ್ರ ಜೀವಿಗಳು. ಸಾವಯವ ಕೃಷಿಯಲ್ಲಿ ರೋಗ ನಿರ್ವಹಣೆ.
  • ಬೆಳೆ ಪದ್ಧತಿ, ಬೆಳೆ ಪರಿವರ್ತನೆ, ಬಹುಬೆಳೆ, ಅಂತರಬೆಳೆ, ಬಹು ಅಂತಸ್ತು ಬೆಳೆ ಪದ್ಧತಿಗಳು.
  • ಸಾವಯವ ಕೃಷಿಯಲ್ಲಿ ಪಶು ಪಾಲನೆಯ ಸಮ್ಮಿಲನ- ಸ್ಥಳದಲ್ಲಿಯೇ ಮೇವಿನ ಉತ್ಪಾದನೆ ಸೇರಿದಂತೆ ಕೃಷಿ ಉಪಕಸುಬುಗಳು – ಕುರಿ, ಕೋಳಿ, ಹಂದಿ, ಮೊಲ, ಜೇನು ಹಾಗೂ ಮೀನು ಸಾಕಾಣಿಕೆ ಮತ್ತು ಇತರೆ ಉಪಕಸುಬುಗಳು.
  • ಮಣ್ಣು ಮತ್ತು ನೀರಿನ ಸಂರಕ್ಷಣೆ ಪದ್ಧತಿಗಳು ಮತ್ತು ಮಳೆ ನೀರು ಕೊಯ್ಲು, ಪುನರ್ ನವೀಕರಿಸುವ ಶಕ್ತಿ ಮೂಲಗಳು – ಜೈವಿಕ ಅನಿಲ ಸ್ಥಾವರ, ಸೌರಶಕ್ತಿ, ಹೊಗೆ ರಹಿತ ಒಲೆ ಇತ್ಯಾದಿ.
  • ಕರಪತ್ರ, ಭಿತ್ತಿ ಪತ್ರ ಇತ್ಯಾದಿಗಳಿಗೆ ತಾಂತ್ರಿಕ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾನಿಲಯಗಳಿಂದ, ಸಾವಯವ ಕೃಷಿ ಬಗ್ಗೆ ಈಗಾಗಲೇ ಪ್ರಕಟಿತವಾಗಿರುವ ಪುಸ್ತಕಗಳಿಂದ, ಇತರೆ ಪ್ರಕಟಣೆಗಳಿಂದ ಪಡೆಯಬಹುದಾಗಿದೆ.
  • ಸ್ಥಳೀಯ ಅವಶ್ಯಕತೆ ಆಧಾರಿಸಿ ಸೂಕ್ತ ಮಾರ್ಪಾಡು ಮಾಡಿಕೊಳ್ಳಬಹುದಾಗಿದೆ. ಸಾವಯವ ಕೃಷಿಗೆ ಪೂರಕವಾಗಿ ಇನ್ನಾವುದೇ ವಿಷಯಗಳನ್ನು ತರಬೇತಿಯಲ್ಲಿ ಅಡಕಗೊಳಿಸಿಕೊಳ್ಳಬಹುದಾಗಿದೆ.

 

ಎರಡನೇ ತರಬೇತಿ ವಿಷಯಗಳು: ಮಾರುಕಟ್ಟೆ ಆಧಾರಿತ ತರಬೇತಿ ಮತ್ತು ಸಾಮರ್ಥ್ಯಭಿವೃದ್ಧಿ

  • ಎರಡನೇ ತರಬೇತಿಯನ್ನು ಒಂದು ತಿಂಗಳ ಅಂತರದಲ್ಲಿ ಮಾರುಕಟ್ಟೆ ಆಧಾರಿತ ವಿಷಯಗಳಿಗೆ ಒತ್ತು ನೀಡಿ ಆಯೋಜಿಸುವುದು
  • ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಒತ್ತು ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಆಧಾರಿತ ತರಬೇತಿ ಏರ್ಪಡಿಸುವುದು.
  • ಕೊಯ್ಲಿನೋತ್ತರ ತಂತ್ರಜ್ಞಾನ, ಮೌಲ್ಯವರ್ಧನೆ, ಸಂಸ್ಕರಣೆ, ಗ್ರೇಡಿಂಗ್, ಕ್ಲೀನಿಂಗ್, ಪ್ಯಾಕಿಂಗ್, ದಾಸ್ತಾನು, ಸಾಗಾಣಿಕೆ, ನೇರ ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ತರಬೇತಿ ಏರ್ಪಡಿಸುವುದು.
  • ಪ್ರತಿ ಶಿಕ್ಷಣಾರ್ಥಿಗೆ ರೂ.500/-ರಂತೆ ಅನುದಾನ ಒದಗಿಸಲಾಗುವುದು. ತರಬೇತಿಗೆ ಹಾಜರಾಗುವ ಶಿಕ್ಷಣಾರ್ಥಿಗಳಿಗೆ ಕಾಫಿ/ಟೀ ತಿಂಡಿ ಮತ್ತು ಊಟ, ತರಬೇತಿ ಸಾಮಗ್ರಿಗಳು, ಸಾಧನಗಳು, ಲೇಖನ ಸಾಮಗ್ರಿ/ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಧನ, ಶಿಕ್ಷಣಾರ್ಥಿಗಳ ಪ್ರಯಾಣ ವೆಚ್ಚ ತಾಂತ್ರಿಕ ಮಾಹಿತಿಯ ಜೆರಾಕ್ಸ್ ಮತ್ತು ತರಬೇತಿ ಆಯೋಜನೆಗೆ ಪೂರಕವಾದ ಇನ್ಯಾವುದೇ ವೆಚ್ಚಗಳನ್ನು ಈ ಅನುದಾನದಲ್ಲಿ ಭರಿಸುವುದು.
  • ತಮ್ಮ ತಾಲ್ಲೂಕಿನ ಸಾವಯವ ಬೆಳೆಗಳನ್ನು ಗಮನದಲ್ಲಿಟ್ಟುಕೊಂಡು ಮೇಲೆ ತಿಳಿಸಿರುವ ವಿಷಯಗಳ ಬಗ್ಗೆ ಪರಿಣಿತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳನ್ನು/ಸಂಸ್ಥೆಗಳು, ಕೃವಿವಿ, ಕೆವಿಕೆಗಳನ್ನು ಸಂಪರ್ಕಿಸಿ ತರಬೇತಿ ಆಯೋಜನೆಗೆ ಕ್ರಮ ಕೈಗೊಳ್ಳುವುದು.
  • ಆಂತರಿಕ ನಿಯಂತ್ರಣ ವ್ಯವಸ್ಥೆ (ICS), tracenet ಅಳವಡಿಕೆ ಮತ್ತು ಸಾವಯವ ಕ್ಷೇತ್ರಗಳ ಗುಂಪು ಪ್ರಮಾಣೀಕರಣ- KSSOCA ಸಂಸ್ಥೆಯ ಮುಖಾಂತರ.
  • ಸಾಮಾಜಿಕ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಹಾಗೂ ತಮ್ಮ ಅಧೀನದ ರೈತರುಗಳ ಕ್ಷೇತ್ರವನ್ನು KSSOCA ಸಂಸ್ಥೆಯ ಮುಖಾಂತರ ಸಾವಯವ ಪ್ರಮಾಣೀಕರಣಕ್ಕೆ ಒಳಪಡಿಸುವಂತೆ ಉತ್ತೇಜಿಸುವುದು.
  • ಹತ್ತಿರದ ಫುಡ್ ಪಾರ್ಕ್ ಗಳು, ಕೃ.ವಿ.ವಿಗಳ ಸಂಸ್ಕರಣಾ ಘಟಕಗಳು, ಇನ್ಯಾವುದೇ ಮೌಲ್ಯವರ್ಧನೆ/ ಸಂಸ್ಕರಣಾ/ಪ್ಯಾಕಿಂಗ್ ಘಟಕಗಳಿಗೆ ಭೇಟಿ ಏರ್ಪಡಿಸುವುದು.

ಮೂರನೇ : ಸಾವಯವ ಮತ್ತು ಸಿರಿಧಾನ್ಯ ಉತ್ಪಾದಕರ – ಮಾರುಕಟ್ಟೆದಾರರ ಕಾರ್ಯಾಗಾರ:

  • ಎರಡೂ ತರಬೇತಿಯಲ್ಲಿ ಭಾಗವಹಿಸಿದ ರೈತರನ್ನೊಳಗೊಂಡಂತೆ ಸಾವಯವ / ಸಿರಿಧಾನ್ಯ ಉತ್ಪಾದಕರ – ಮಾರುಕಟ್ಟೆದಾರರ ಒಂದು ದಿನದ ಸಮಾವೇಶವನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
  • ಕಾರ್ಯಾಗಾರದ ಜೊತೆಗೆ ಸಾವಯವ ಕೃಷಿಯ ತತ್ವಗಳು, ಪದ್ಧತಿಗಳು, ಪರಿಕರಗಳು ಇವುಗಳನ್ನೊಳಗೊಂಡ ಸಣ್ಣ ಪ್ರಮಾಣದ ವಸ್ತು ಪ್ರದರ್ಶನ, ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೆಯೇ ಗ್ರಾಹಕರಲ್ಲಿ ಅರಿವು ಮೂಡಿಸಲು ಸಾವಯವ ಮತ್ತು ಸಿರಿಧಾನ್ಯಗಳ ಫುಡ್ ಕೋರ್ಟ್ ಮಳಿಗೆಗಳನ್ನು ಸಹ ಆಯೋಜಿಸುವುದು.
  • ಮಾರುಕಟ್ಟೆದಾರರನ್ನು, ಗ್ರಾಹಕರನ್ನು ಹಾಗೂ ಸಾರ್ವಜನಿಕರನ್ನು ಗರಿಷ್ಠ ಸಂಖ್ಯೆಯಲ್ಲಿ ಸೆಳೆದು ಆಯಾ ವ್ಯಾಪ್ತಿಯ ಸಾವಯವ ಮತ್ತು ಸಿರಿಧಾನ್ಯ ಕೃಷಿಕರಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸಿಕೊಡುವುದು.
  • ಕಾರ್ಯಾಗಾರದ ಬಗ್ಗೆ ಸುದ್ದಿ ಮಾದ್ಯಮಗಳ ಮುಖಾಂತರ (ಸ್ಥಳೀಯ ಪತ್ರಿಕೆಗಳು, ರೇಡಿಯೋ, ಸ್ಥಳೀಯ ಟಿವಿ ಚಾನೆಲ್, ಪೋಸ್ಟರ್, ಕರಪತ್ರಗಳು ಇತ್ಯಾದಿ) ವ್ಯಾಪಕ ಪ್ರಚಾರ ನೀಡುವುದು.

ಈ ಕಾರ್ಯಕ್ರಮದ ಉದ್ದೇಶವು ಜಿಲ್ಲೆಯ ರೈತರಿಗೆ, ಮಾರುಕಟ್ಟೆದಾರರಿಗೆ, ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವುದಾಗಿದೆ.

ನಾಟಿ ತಳಿಗಳ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆಃ

  • ಕಣ್ಮರೆಯಾಗುತ್ತಿರುವ ಮತ್ತು ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳನ್ನು ಸಂಗ್ರಹಿಸಿ ಅಭಿವೃದ್ಧಿಪಡಿಸಿ ಸಂರಕ್ಷಿಸುವ ಉದ್ದೇಶದಿಂದ ಸಮುದಾಯ ಬೀಜ ಬ್ಯಾಂಕ್‍ಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ
  • ಸ್ವಂತ ಸಾವಯವ ಕ್ಷೇತ್ರ ಹೊಂದಿರುವ ಸಾಮಾಜಿಕ ಸಂಸ್ಥೆಗಳಲ್ಲಿ ದೇಶೀಯ/ಸ್ಥಳೀಯ ಬಿತ್ತನೆ ಬೀಜಗಳ ಸಂಗ್ರಹಣೆ/ಸಂರಕ್ಷಣೆ ಮಾಡಲು ಬೀಜ ಬ್ಯಾಂಕ್ ಘಟಕದಡಿ ರೂ.20000/- ಅನುದಾನವನ್ನು ಒದಗಿಸಲು ಅವಕಾಶವಿರುತ್ತದೆ.
  • ಅಲ್ಲದೇ, ರೈತರಲ್ಲಿ ಬೀಜ ಸ್ವಾವಲಂಬನೆ ಬೆಳೆಸುವುದು ಈ ಕಾರ್ಯಕ್ರಮದ ಮತ್ತೊಂದು ಉದ್ದೇಶ ವಾಗಿರುವುದರಿಂದ ಕಾರ್ಯಕ್ರಮದಡಿ ಸಂಗ್ರಹಿಸಿ ಸಂರಕ್ಷಿಸುವ ಬೀಜಗಳಿಂದ ಮುಂದಿನ ದಿನಗಳಲ್ಲಿ ಕ್ಷೇತ್ರೋತ್ಸವ ಆಯೋಜಿಸಲು ನಿಗದಿಪಡಿಸಿರುವ ರೂ.50000/-ಗಳ ಅನುದಾನವನ್ನು ಬಳಸಿಕೊಳ್ಳಲು ಜಿಲ್ಲಾ ಚಾಲನಾ ಸಮಿತಿಯಲ್ಲಿ ಚರ್ಚಿಸಿ ಅವಕಾಶ ಕಲ್ಪಿಸುವುದು.
  • ಬೀಜ ಬ್ಯಾಂಕ್ ಸ್ಥಾಪನೆಗಾಗಿ ಅನುದಾನ ಒದಗಿಸಲಾಗಿದ್ದು, ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆಯಲ್ಲಿ ಈ ಕೆಳಗೆ ತಿಳಿಸಿರುವಂತೆ ವಿವಿಧ ಘಟಕಗಳ ವೆಚ್ಚ ಭರಿಸಲು ಅವಕಾಶ ಕಲ್ಪಿಸಲಾಗಿದೆ.

 

ಘಟಕ ಪ್ರಮಾಣ ಅನುದಾನ (ರೂ.ಗಳಲ್ಲಿ)
ಸಮುದಾಯ ಬೀಜ ಬ್ಯಾಂಕ್
ದೇಸಿ ಬೀಜಗಳನ್ನು ಶೇಖರಣೆ ಮಾಡಲು ವಾಡೆ ಗಳು ಸಂಖ್ಯೆ.15 20,000/-
ದೇಸಿ ಬೀಜಗಳ ಮಾದರಿ ಸಂಗ್ರಹಿಸಲು ಗಾಜಿನ ಬಾಟಲ್ ಗಳು ಸಂಖ್ಯೆ.50
ಬಿತ್ತನೆ ಬೀಜಗಳ ಸಂಗ್ರಹಣೆಗೆ ಮಣ್ಣಿನ ಮಡಿಕೆಗಳು ಸಂಖ್ಯೆ.10
ಬೀಜ ಬ್ಯಾಂಕ್ ಕಾರ್ಡ್, ದಾಖಲಾತಿ ಪುಸ್ತಕ, ಬೀಜ ಸಂಗ್ರಹಣಾ ನಮೂನೆ, ಮತ್ತು ಲೇಖನ ಸಾಮಗ್ರಿ —-
Racks ಮತ್ತು Shelves ಗಳ ಖರ್ಚು —-
ತೂಕದ ಯಂತ್ರ 1
ಗೋಡೆ ಬರಹ ಮತ್ತು ಬೀಜ ಬ್ಯಾಂಕ್ ಬೋರ್ಡ್ —-
ಷರಾ: ಜಿಲ್ಲಾ ಚಾಲನಾ ಸಮಿತಿಯ ಅನುಮೋದನೆಯೊಂದಿಗೆ ಅವಶ್ಯಕವಿದ್ದಲ್ಲಿ ಅಂತರ ಘಟಕ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ
  1. ಕ್ಷೇತ್ರೋತ್ಸವ ಆಯೋಜನೆ:
  • ಕ್ಷೇತ್ರದಲ್ಲಿ ಬಹುಪಾಲು ಬೆಳೆಗಳು ಫಸಲು ನೀಡುವ/ಕಟಾವು ಹಂತದಲ್ಲಿ ಕ್ಷೇತ್ರೋತ್ಸವವನ್ನು ಏರ್ಪಡಿಸುವುದು.
  • ಕ್ಷೇತ್ರೋತ್ಸವಕ್ಕೆ ಪ್ರಸಾರ/ಮುದ್ರಣ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ನೀಡುವುದು.
  • ಹತ್ತಿರದ ಸಂಶೋಧನಾ ಕೇಂದ್ರದ ವಿಜ್ಞಾನಿಗಳನ್ನು, ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳನ್ನು, ಚುನಾಯಿತ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು.
  • ಕ್ಷೇತ್ರದಲ್ಲಿ ಬೆಳೆ ಪದ್ಧತಿಗಳ ಬಗ್ಗೆ, ತಳಿಗಳ ಬಗ್ಗೆ, ಉಪಯೋಗಿಸಲಾದ ಸಾವಯವ ಪರಿಕರಗಳ ಬಗ್ಗೆ, ಅನುಸರಿಸಲಾದ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ಫಲಕಗಳನ್ನು ಬರೆಯಿಸಿ ವೀಕ್ಷಕರ ಗಮನ ಸೆಳೆಯುವುದು.
  • ಕ್ಷೇತ್ರೋತ್ಸವದ ಆಯೋಜನೆಯನ್ನು ಸಾಮಾಜಿಕ ಸಂಸ್ಥೆಯು ಸಾವಯವ ಕೃಷಿಯಲ್ಲಿ ಸಾಮಾರ್ಥ್ಯಾಭಿವೃದ್ದಿ ಚಟುವಟಿಕೆಗಳಾದ ತರಬೇತಿ ಅಥವಾ ಕಾರ್ಯಾಗಾರದೊಂದಿಗೆ ಜೋಡಿಸಬಹುದಾಗಿದ್ದು, ಈ ಕುರಿತು ಮುಂಚಿತವಾಗಿಯೇ ಯೋಜನೆ ರೂಪಿಸಿಕೊಳ್ಳುವುದು.

 

ತರಬೇತಿ ಮತ್ತು ಕಾರ್ಯಾಗಾರ ಆಯೋಜನೆಯಲ್ಲಿ ಸಾಮಾನ್ಯ ನಿರ್ದೇಶನಗಳು:

  • ಜಿಲ್ಲೆಯಲ್ಲಿ ತರಬೇತಿಗಳು/ ಕಾರ್ಯಾಗಾರದ ಆಯೋಜನೆಗೆ ನಿಗದಿಪಡಿಸಿದ ದಿನಾಂಕ, ಸ್ಥಳ ಹಾಗೂ ಕಾರ್ಯಕ್ರಮದ ಆಯೋಜನೆಗೆ ಸಿದ್ದಪಡಿಸಿದ ರೂಪರೇಷೆಗಳ ಮಾಹಿತಿಯನ್ನು ಈ ಕೂಡಲೇ ಕೇಂದ್ರ ಕಛೇರಿಗೆ ಸಲ್ಲಿಸುವುದು.
  • ಆಯೋಜಿಸಲಾಗುವ ತರಬೇತಿಗಳು/ ಕಾರ್ಯಾಗಾರಗಳಿಗೆ ಸಾವಯವ ಕೃಷಿಯ ರಾಜ್ಯ ಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿಯ ಅಧ್ಯಕ್ಷರು ಹಾಗೂ ಆಯಾ ಕಂದಾಯ ವಿಭಾಗದ ಅಧಿಕಾರೇತರ ಸಮಿತಿ ಸದಸ್ಯರನ್ನು ತಪ್ಪದೇ ಆಹ್ವಾನಿಸುವುದು.
  • ತರಬೇತಿ/ಕಾರ್ಯಗಾರ ಆಯೋಜಿಸಿದ ನಂತರ ಪ್ರಗತಿಯ ವರದಿಯಲ್ಲಿ ಏರ್ಪಡಿಸಲಾದ ತರಬೇತಿ ವಿಷಯಗಳು, ಭಾಗವಹಿಸಿದ್ದ ರೈತರುಗಳ ಸಂಖ್ಯೆ, ಭಾಗವಹಿಸಿದ್ದ ವಿಷಯ ತಜ್ಞರು, ಏರ್ಪಡಿಸಲಾಗಿದ್ದ ಪ್ರಾತ್ಯಕ್ಷಿಕೆ ಈ ಎಲ್ಲಾ ವಿವರಗಳನ್ನು ಆಯಾ ಸಾಮಾಜಿಕ ಸಂಘ ಸಂಸ್ಥೆಗಳು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರುಗಳ ಮುಖಾಂತರ ಕೇಂದ್ರ ಕಛೇರಿಗೆ ಸಲ್ಲಿಸುವುದು.
  • ಒಟ್ಟಾರೆಯಾಗಿ, ಜಿಲ್ಲೆಗಳಿಗೆ ಬಿಡುಗಡೆ ಮಾಡಲಾದ ತಲಾ ರೂ.10.00ಲಕ್ಷ ಅನುದಾನವನ್ನು ಕ್ಷೇತ್ರ ಮಟ್ಟದ ಕೃಷಿಕರಿಗೆ ಸಾವಯವ ಕೃಷಿ ಸಾಮಾರ್ಥ್ಯಾಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಇಲಾಖೆಯು ಮತ್ತು ಜಿಲ್ಲೆಯಲ್ಲಿ ಈ ಸಂಬಂಧ ಆಯ್ಕೆಯಾಗಿರುವ ಸಾಮಾಜಿಕ ಸಂಸ್ಥೆಯು ಜಂಟಿಯಾಗಿ ನೀಡಲಾಗಿರುವ ಮಾರ್ಗಸೂಚಿಯನ್ವಯ ಸ್ಥಳೀಯ ಅವಶ್ಯಕತೆಗನುಗುಣವಾಗಿ ಜಿಲ್ಲಾ ಚಾಲನಾ ಸಮಿತಿಯ ಅನುಮೋದನೆಯೊಂದಿಗೆ ಯಶಸ್ವಿಯಾಗಿ ಆಯೋಜಿಸಲು ಕ್ರಮವಹಿಸುವುದು.
  • ಪ್ರತಿ ಸಾಮಾಜಿಕ ಸಂಸ್ಥೆಗೆ ಬಿಡುಗಡೆಮಾಡಿರುವ ರೂ. 10.00ಲಕ್ಷಗಳ ಅನುದಾನವನ್ನು ಈ ಕೆಳಕಂಡ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದಾಗಿರುತ್ತದೆ.
ಕ್ರ.ಸಂ ಕಾರ್ಯಕ್ರಮ ಮಾದರಿ -1 ಮಾದರಿ-2 ಷರಾ
1 ರೈತರ ತರಬೇತಿ -2 4.00 4.70
2 ಕಾರ್ಯಾಗಾರ/ವಸ್ತು ಪ್ರರ್ದಶನ  ಆಯೋಜನೆ-1 5.30 5.30
3 ಬೀಜ ಬ್ಯಾಂಕ್ 0.20 0.00 ಸಾವಯವ ಕೃಷಿ ಪ್ರದೇಶ ಹೊಂದಿರುವ ಸಂಸ್ಥೆಗಳಿಗೆ  ಅನ್ವಯ
4 ಕ್ಷೇತ್ರೋತ್ಸವ 0.50 0.00
ಒಟ್ಟು 10.00 10.00
ಷರಾ: ಸ್ಥಳೀಯ ಅವಶ್ಯಕತೆ ಆಧಾರಿಸಿ ಸೂಕ್ತ ಮಾರ್ಪಾಡು ಮಾಡಿಕೊಳ್ಳಲು ಜಿಲ್ಲಾ ಮಟ್ಟದ ಚಾಲನಾ ಸಮಿತಿಗೆ ಅವಕಾಶ ಕಲ್ಪಿಸಲಾಗಿದೆ.

 

ಸಾಮಾಜಿಕ ಸಂಸ್ಥೆಯನ್ನು ಆಯ್ಕೆ ಮಾಡಲು ಬಾಕಿ ಇರುವ 10 ಜಿಲ್ಲೆಗಳಿಗೆ ಮಾಹಿತಿ:

 

  • “ಸಾವಯವ ಸಿರಿ” ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಮುಂದುವರೆಸಲಾಗಿದ್ದು ಸಾವಯವ ಕೃಷಿಯಲ್ಲಿ ಸಾಮಾರ್ಥ್ಯಾಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಮಾಜಿಕ ಸಂಸ್ಥೆಯನ್ನು ಆಯ್ಕೆಮಾಡಲಾಗದೇ ಇರುವ ಬಾಕಿ 10 ಜಿಲ್ಲೆಗಳು (ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಕೊಪ್ಪಳ, ಮೈಸೂರು, ರಾಮನಗರ, ಉತ್ತರಕನ್ನಡ, ಯಾದಗಿರಿ ಮತ್ತು ವಿಜಯನಗರ) ಜಿಲ್ಲಾಮಟ್ಟದಲ್ಲಿ ನೋಂದಾಯಿತ ಸಾಮಾಜಿಕ ಸಂಸ್ಥೆಗಳನ್ನು ಆಯ್ಕೆ ಮಾಡಲು ಮತ್ತೊಮ್ಮೆ ಅರ್ಜಿ ಆಹ್ವಾನಿಸಿ, ಈಗಾಗಲೇ ಶಿಫಾರಸ್ಸು ಮಾಡಲಾಗಿರುವ ಸಾಮಾಜಿಕ ಸಂಸ್ಥೆಗಳೊಂದಿಗೆ ನೀಡಲಾಗಿರುವ ಅರ್ಜಿ ತಪಾಸಣೆ ಮಾನದಂಡಗಳನ್ವಯ ಪರಿಶೀಲಿಸಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಅಧ್ಯಕ್ಷತೆಯ ಚಾಲನಾ ಸಮಿತಿಯ ಸ್ಪಷ್ಟ ಶಿಫಾರಸ್ಸಿನೊಂದಿಗೆ ರಾಜ್ಯ ಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿ ಸಭೆಯ ಅನುಮೋದನೆಗಾಗಿ ಕೇಂದ್ರ ಕಛೇರಿಗೆ ಅರ್ಹ ಸಂಸ್ಥೆಗಳ ಪಟ್ಟಿಯನ್ನು ಕಳುಹಿಸುವುದು.

·        ಸಭೆಯ ತೀರ್ಮಾನದನ್ವಯ ಜಿಲ್ಲೆಗಳಿಗೆ ಆಯ್ಕೆಯಾದ ಸಾಮಾಜಿಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡ ನಂತರ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಆ ವ್ಯಾಪ್ತಿಯ ಉಪ ಕೃಷಿ ನಿರ್ದೇಶಕರು ಹಾಗೂ ಸಾಮಾಜಿಕ ಸಂಸ್ಥೆಯು ನಿಯೋಜಿಸುವ ಪ್ರತಿನಿಧಿ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆದು ಯೋಜನೆಯಡಿ ಸಾಮಾರ್ಥ್ಯಾಭಿವೃದ್ದಿ ಚಟುವಟಿಕೆಗಳಿಗಾಗಿ ಬಿಡುಗಡೆ ಮಾಡಲಾಗುವ ತಲಾ ರೂ.10.00 ಲಕ್ಷಗಳ ಅನುದಾನವನ್ನು ಈ ಖಾತೆಗೆ ವರ್ಗಾಯಿಸುವುದು.

·        ಸದರಿ ಅನುದಾನದಲ್ಲಿ ಕ್ಷೇತ್ರ ಮಟ್ಟದ ಸಾವಯವ ಕೃಷಿಕರಿಗೆ/ರೈತರಿಗೆ ಮೇಲೆ ತಿಳಿಸಿರುವಂತೆ ಸಾಮಾರ್ಥ್ಯಾಭಿವೃದ್ದಿ ಚಟುವಟಿಕೆಗಳನ್ನು ಇಲಾಖೆ ಹಾಗೂ ಸಾಮಾಜಿಕ ಸಂಸ್ಥೆಯು ಜಂಟಿಯಾಗಿ ಆಯೊಜಿಸಲು ಕ್ರಮವಹಿಸುವುದು.

 

2022-23 ನೇ ಸಾಲಿಗೆ ರೈತಸಿರಿ ಮತ್ತು ಸಿರಿಧಾನ್ಯ ಉತ್ತೇಜನ ಕಾರ್ಯಕ್ರಮ  ಮಾರ್ಗಸೂಚಿಗಳು ಲೆಕ್ಕ ಶೀರ್ಷಿಕೆ: 2401-00-104-0-12 (106, 422, 423)

2022-23ನೇ ಸಾಲಿನ ರೈತಸಿರಿ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯವಲಯದಡಿ ಒಟ್ಟು ರೂ.500.00ಲಕ್ಷಗಳ ಅನುದಾನವನ್ನು ಒದಗಿಸಲಾಗಿದ್ದು, ಈ ಅನುದಾನದಲ್ಲಿ  ಹಿಂದಿನ ಸಾಲಿನ (2021-22ನೇ ಸಾಲಿನ) ರೈತಸಿರಿ ಯೋಜನೆಯಡಿ ಪ್ರೋತ್ಸಾಹಧನ ನೀಡಲು ಬಾಕಿ ಇರುವ ರೈತರಿಗೆ ಪ್ರೋತ್ಸಾಹಧನ ನೀಡಲು ಆದ್ಯತೆ ನೀಡುವುದು. ನಂತರ 2021-22ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಹಾಗು ಬರಗು ಸಿರಿಧಾನ್ಯಗಳನ್ನು ಬೆಳೆದಿರುವ ರೈತರಿಗೆ ರಾಜ್ಯವಲಯದಡಿ ರೂ10,000 ಪ್ರತಿ ಹೆಕ್ಟೇರ್ ಗೆ (ಗರಿಷ್ಠ 2 ಹೆಕ್ಟೇರ್) ಪ್ರೋತ್ಸಾಹಧನ ನೀಡುವುದು.

ರೈತಸಿರಿಯೋಜನೆಯ ಮುಖ್ಯ ಉದ್ದೇಶಗಳು:

  • ರಾಜ್ಯದಲ್ಲಿನ ಸಿರಿಧಾನ್ಯಗಳ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು.
  • ಸಿರಿಧಾನ್ಯಗಳು ಪೌಷ್ಠಿಕ ಆಹಾರ, ರೈತರ ಭದ್ರತೆ, ಸುಸ್ಥಿರ ಕೃಷಿ ಮತ್ತು ಪರಿಸರದ ಸಂರಕ್ಷಣೆಗೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಬೆಳೆಯನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವುದು.
  • ಅತೀ ಕಡಿಮೆ ಮಳೆ ಹಾಗೂ ಕಡಿಮೆ ಫಲವತ್ತತೆಯುಳ್ಳ ಜಮೀನಿನ ಸದ್ಬಳಕೆ ಮಾಡುವುದು.
  • ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಮಾರುಕಟ್ಟೆ ಸಂಪರ್ಕ ಹೆಚ್ಚಿಸಿ ಕೃಷಿ ಮತ್ತು ಆಹಾರದ ಮುಖ್ಯ ವಾಹಿನಿಗೆ ತರುವುದು.

ಮುಂದುವರೆದು, ಸಿರಿಧಾನ್ಯಗಳ ಸಂಸ್ಕರಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈತಸಿರಿ ಯೋಜನೆಯಡಿ ಸಿರಿಧಾನ್ಯ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರ್ಯಾಂಡಿಂಗ್ ಘಟಕಗಳಿಗೆ ಸಹಾಯಧನ ನೀಡಲು ಸಹ ಅವಕಾಶ ಕಲ್ಪಿಸಲಾಗಿರುತ್ತದೆ.  ಯೋಜನೆಯಡಿ ಪ್ರಸ್ತಾವನೆಯ ಯಂತ್ರೋಪಕರಣಗಳ ಒಟ್ಟು ವೆಚ್ಚದ ಮೇಲೆ ಸಹಾಯಧನವಾಗಿ ಶೇ.50ರಷ್ಟು ಅಥವಾ ಗರಿಷ್ಠ ರೂ.10.00 ಲಕ್ಷಗಳವರೆಗೆ ಪಡೆಯಬಹುದಾಗಿದ್ದು ಈ ಸಂಬಂಧ ಜಿಲ್ಲೆಗಳಲ್ಲಿ ಆಸಕ್ತ ಕೃಷಿಕರು/ಗುಂಪುಗಳಿಂದ ಪ್ರಸ್ತಾವನೆಗಳನ್ನು ಪಡೆದು ಪರಿಶೀಲಿಸಿ ಸೂಕ್ತ ದಾಖಲಾತಿಗಳೊಂದಿಗೆ ಕೇಂದ್ರ ಕಚೇರಿಯ ಅನುಮೋದನೆಗೆ ಸಲ್ಲಿಸುವುದು.

ಅದಲ್ಲದೇ, ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಕಾರ್ಯಕ್ರಮಗಳು- ತಾಲ್ಲೂಕು/ ಜಿಲ್ಲೆ/ರಾಜ್ಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಗಾರ/ಮೇಳ/ವಸ್ತು ಪ್ರದರ್ಶನ/ ಇನ್ನಿತರೆ ಸಂಬಂಧಿತ ಕಾರ್ಯಕ್ರಮಗಳ ಆಯೋಜನೆ/ಭಾಗವಹಿಸುವಿಕೆ. ಮುಂದುವರೆದು, 2022-23ನೇ ಸಾಲನ್ನು  ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿರುವ ಹಿನ್ನಲೆಯಲ್ಲಿ ಇದರ ಪೂರಕವಾಗಿ ರಾಜ್ಯದಲ್ಲಿ ಸಿರಿಧಾನ್ಯ ಸಂಬಂಧಿತ ಕಾರ್ಯಕ್ರಮಗಳ ಅನುಷ್ಠಾನ. ಈ ಸಂಬಂಧದ ಸುತ್ತೋಲೆಯನ್ನು ನಂತರದ ದಿನಗಳಲ್ಲಿ ನೀಡಲಾಗುವುದು.

 

 “ಆರ್.ಕೆ.ವಿ.ವೈ ರೈತಸಿರಿಯೋಜನೆಯ ಅನುಷ್ಠಾನ ಮಾರ್ಗಸೂಚಿ

 2022-23 ನೇ ಸಾಲಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ RKVY  ಯೋಜನೆಯಡಿ ಪ್ರತಿ ಹೆಕ್ಟೇರ್ ಗೆ ರೂ.6000 ಪ್ರೋತ್ಸಾಹಧನ (ಗರಿಷ್ಠ 2 ಹೆಕ್ಟೇರ್) DBT ಮುಖಾಂತರ :

2022-23 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಮುಖ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು (ರಾಗಿ, ಜೋಳ ಮತ್ತು ಸಜ್ಜೆ ಹೊರತುಪಡಿಸಿ) ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಪ್ರತಿ ಹೆಕ್ಟೇರ್ ಗೆ 6000 ಸಾವಿರ ರೂ. ಮಾತ್ರ ನಗದು ಪ್ರೋತ್ಸಾಹಧನವನ್ನು ಆರ್.ಕೆ.ವಿ.ವೈ  ರೈತಸಿರಿ ಯೋಜನೆ ಲೆಕ್ಕ ಶೀರ್ಷಿಕೆ: 2401-00-800-1-57 ರಡಿಯ ರೈತಸಿರಿ ಯೋಜನೆಯಡಿ ನೇರ ಸೌಲಭ್ಯ ವರ್ಗಾವಣೆ ಮೂಲಕ (Direct Benefit Transfer) ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮೂಲಕ ಹೆಚ್ಚಿನ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸುವುದು.

ಫಲಾನುಭವಿಗಳ ಆಯ್ಕೆ:

  1. ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಬೆಳೆ ಸಮೀಕ್ಷೆ ಆಧಾರದ ಮೇರೆಗೆ ತಮ್ಮ ಜಿಲ್ಲೆಗೆ ತಾಲ್ಲೂಕುವಾರು ತಾತ್ಕಾಲಿಕವಾಗಿ ಗುರಿಯನ್ನು ನಿಗದಿಪಡಿಸಿಕೊಳ್ಳವುದು.
  2. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಈ ಯೋಜನೆಯ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ರೈತರಿಗೆ ಮಾಹಿತಿ ನೀಡಿ ರೈತರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ತಮ್ಮ ಹೆಸರನ್ನು FRUITS ID ಯೊಂದಿಗೆ ನೋಂದಾಯಿಸಿಕೊಳ್ಳಲು ಗಡುವು ನೀಡುವುದು.
  3. ಜಂಟಿ ಖಾತೆಗೆ ಸಂಬಂದಿಸಿದ ಸರ್ವೆ ನಂಬರ್ ಗಳಲ್ಲಿ ಸಿರಿಧಾನ್ಯ ಬೆಳೆ ಬೆಳೆಯುವ ರೈತನಿಗೆ FRUITS ID ಯೊಂದಿಗೆ ನೋಂದಾಯಿಸುವುದರ ಜೊತೆಗೆ ಇತರೆ ಖಾತೆದಾರರಿಂದ ಒಪ್ಪಿಗೆ ಪತ್ರ ಪಡೆಯುವುದು.
  4. ನೋಂದಾಯಿತ ಸಿರಿಧಾನ್ಯ ಬೆಳೆದ ರೈತರಿಗೆ ಬೆಳೆ ಸಮೀಕ್ಷೆಯಲ್ಲಿ ಬೆಳೆಯನ್ನು Upload ಮಾಡಲು ತಿಳಿಸುವುದು / PR ಗಳಿಂದ ಕಡ್ಡಾಯವಾಗಿ ಬೆಳೆ ಸಮೀಕ್ಷೆಯಲ್ಲಿ ನೊಂದಾಯಿಸಿಕೊಳ್ಳಲು ರೈತರಿಗೆ ತಿಳಿಸುವುದು.
  5. ಕಾನೂನು ರೀತ್ಯ ಪಜಾ/ಪಪಂ/ಅಲ್ಪಸಂಖ್ಯಾತರು/ಮಹಿಳೆಯರು/ ಹಿಂದುಳಿದ ವರ್ಗದ ರೈತರಿಗೆ ಆದ್ಯತೆ ನೀಡುವುದು.
  6. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್‍ ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ ನೀಡುವುದು.
  7. ಫಲಾನುಭವಿಗಳು ಸಿರಿಧಾನ್ಯ ಬೆಳೆದಿರುವ ವಿಸ್ತೀರ್ಣಕ್ಕೆ ಸಮನಾಗಿ ಪ್ರೋತ್ಸಾಹಧನ ನೀಡುವುದು.
  8. 2022-23 ನೇ ಸಾಲಿನಲ್ಲಿ NFSM ಯೋಜನೆಯಡಿ ಸಿರಿಧಾನ್ಯ ಪ್ರಾತ್ಯಕ್ಷಿಕೆಯ ಫಲಾನುಭವಿಗಳು ರೈತಸಿರಿ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಹವಿರುವುದಿಲ್ಲ.

 

2022-23 ನೇ ಸಾಲಿನ ಸಾವಯವ ಕೃಷಿ ಮತ್ತು ಸಿರಿಧಾನ್ಯ ಕಾರ್ಯಕ್ರಮಗಳು

2401-00-104-0-12

ಉ.ಶೀ ಸಾವಯವ ಕೃಷಿ ಮತ್ತು ಸಿರಿಧಾನ್ಯ ಕಾರ್ಯಕ್ರಮಗಳು ಆರ್ಥಿಕ (ರೂ.ಲಕ್ಷಗಳಲ್ಲಿ)
059 ಸಾವಯವ ಕೃಷಿ–ಆಡಳಿತಾತ್ಮಕ ಮತ್ತು ಉತ್ತೇಜನ ಕಾರ್ಯಕ್ರಮಗಳು

(ಪ್ರಮಾಣೀಕರಣ, ಸಾವಯವ ಸಿರಿ ಯೋಜನೆ, ಪ್ರಚಾರ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಸಭೆ/ಸಮಾರಂಭ/ ತರಬೇತಿ/ ಕಾರ್ಯಾಗಾರ/ಅಧ್ಯಯನ ಪ್ರವಾಸ/ ಮೇಳ ಆಯೋಜನೆ, ಆಕಾಶವಾಣಿ/ ದೂರದರ್ಶನ ಪ್ರಾಯೋಜಿತ ಕಾರ್ಯಕ್ರಮಗಳು ಹಾಗೂ ಇತರೆ ಸಂಬಂಧಿತ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳು ಮತ್ತು ಆಡಳಿತಾತ್ಮಕ ವೆಚ್ಚಗಳು)

500.00
059 ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಕಾರ್ಯಕ್ರಮ – ಹೊಸ ಯೋಜನೆ 1000.00
ಒಟ್ಟು 059 1500.00
  ರೈತಸಿರಿ ಮತ್ತು ಸಿರಿಧಾನ್ಯ ಉತ್ತೇಜನ ಕಾರ್ಯಕ್ರಮಗಳು  
106 ಸಾಮಾನ್ಯ 258.00
422 ಪರಿಶಿಷ್ಠ ಜಾತಿ ಉಪಯೋಜನೆ 172.00
423 ಗಿರಿಜನ ಉಪಯೋಜನೆ 70.00
  ಒಟ್ಟು 500.00
ಸಾವಯವ ಕೃಷಿ ಮತ್ತು ಸಿರಿಧಾನ್ಯ ಕಾರ್ಯಕ್ರಮಗಳು – ಒಟ್ಟು 2000.00

 

 For more details check official website